ಗುರುವಾರ, ಡಿಸೆಂಬರ್ 1, 2011

ವಾಸ್ತವಿಕ ಸ್ಥಿತಿಗತಿಯನ್ನು ಕಂಡು ಪ್ರತಿಭಟಿಸುವ ಕವನ

ಸಮ್ಮೇಳನ ಒಂದರಲ್ಲಿ ಕವನ ವಾಚನ ಮಾಡುತಿರುವುದು





ಮುಖವಾಡಗಳ ಸಂಗದಲ್ಲಿ
-------------------------


ತೋರಿಕೆಗೆ ಮಾತ್ರ ತೋರಣ ಕಟ್ಟುವ
ಸಮಾರಂಭಗಳು ಯಾರಿಗೆ ಬೇಕು
ನಿಮ್ಮ ಮೇಜು ಕುಚಿ೯ಗಳು
ಹಸಿದವರ ಹೊಟ್ಟೆಗೆ ಅನ್ನ ನೀಡದಿರುವಾಗ
ದಣಿದು ಬಂದವರಿಗೆ ದಣಿವಾರಿಸಿಕೊಳ್ಳಲು
ಆಗದಿರುವಾಗ....

ನೈಜ ಪ್ರತಿಭೆಗಳ ಕೊಲೆಗಳು ನಡೆಯುತಿವೆ
ಆಗಂತುಕರ ಮನಸಿನ ಮೇಳಗಳಲ್ಲಿ
ಮುಖವಾಡ ತೊಟ್ಟವರ ಮುಖಗಳೇ ಇಲ್ಲಿ
ಕಾಣುತಿರುವಾಗ, ಇದಕ್ಕೆ ಕಾರಣಗಳೆಲ್ಲಿ...

ನಿತ್ಯವೂ ನಡೆಯುವ ಕೊಲೆಗಳಿಗಂಜದೇ
ದುಷ್ಟರ ಸಂಹಾರಕ್ಕೆ ಗಟ್ಟಿ ಮನಸ್ಸಿನ
ಸ್ಪಷ್ಟ ಬರಹಗಾರರ ಚಾಟಿಏಟು ಬೇಕಿಲ್ಲಿ
ಸದೖಢ ಸಮಾಜದ ನಿಮಾ೯ಣಕ್ಕಾಗಿ

ಜಾತಿಯೆಂಬ ವಿಷಬೀಜ ಬಿತ್ತಿ ಬದುಕುತಿವೆ
ಪವಿತ್ರ ಪದಗಳಿಗೆ ಕುಲಗೆಡಿಸಿ ಮೆರೆಯುತಿವೆ
ತೋರಿಕೆಯ ತೋರಣದಲ್ಲಿ, ಹರಕೆಯ ಕುರಿಯಾಗಿ
ಊರೆಲ್ಲ ಮೆರವಣಿಗೆ ಯಾರಿಗೆ ಬೇಕೋ...
ಅವರನ್ನೆಲ್ಲಾ ಕೈಬೀಸಿ ಕರೆಯುತಿವೆ
ಹಸುವಿನ ಮುಖವಾಡ ತೊಟ್ಟ ಜಾತಿ ನಿಮಾ೯ಪಕರು
ಮೂಲ ಪ್ರತಿಭೆಗಳ ನಿಗದಿತ ಕೊಲೆ ಮಾಡಲು ಎಲ್ಲೆಂದರಲ್ಲಿ
ಹಾಕುತಿದ್ದಾರೆ ಹೊಂಚು...
ಕೈ ಚಾಚಿ ಬೇಡುತಿರುವರು ಮಚ್ಚು

ಅದೇಷ್ಟೇ ಸಲವೂ ಕೊಂದು ಬಿಡಲಿ
ಸಾಯುವುದಿಲ್ಲ ನಾವು...ಸುಟ್ಟು ಬೂದಿಯಾದರೂ
ಮತ್ತೆ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಜೀವಿಸಬೇಕು
ಕೊಚ್ಚಿ ಕೊಲೆಗೈಯುವವರ ಸಂಗದಲ್ಲೇ
ಸಾಧನೆಯ ಪಥದಲ್ಲಿ ಸಾಗಬೇಕು.

-ವಿ.ಎಚ್.ವೀರಣ್ಣ ಮಂಠಾಳಕರ್


ಕಳೆದ ನವೆಂಬರ್ 21, 2011 ರಂದು ಬಸವಕಲ್ಯಾಣ ತಾಲೂಕಿನ ಕಸಾಪ ವತಿಯಿಂದ ನಡೆದ ನಾರಾಯಣಪೂರ ವಲಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾಚನ ಮಾಡಿದ ಕವಿತೆ.

ಬುಧವಾರ, ಜುಲೈ 13, 2011

ಮಂಠಾಳಕರ್ ಕವನ ವಾಚನ




ಇದೇ ಜುಲೈ 12, 2011 ರಂದು ಭಾಲ್ಕಿಯಲ್ಲಿ ನಡೆದ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೀರಣ್ಣ ಮಂಠಾಳಕರ್ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಂದಭ೯ದಲ್ಲಿ ಸಮ್ಮೇಳನಾಧ್ಯಕ್ಷರಾದ ಸುಬ್ಬಣ್ಣ ಅಂಬೆಸಿಂಗೆ ಅವರಿಂದ ಗೌರವ ಸನ್ಮಾನ ಸ್ವೀಕರಿಸಿದರು. ಇದೇ ಸಂದಭ೯ದಲ್ಲಿ ಮತ್ತೆ ಹುಟ್ಟಿ ಬರುವುದನ್ನೇ ಮರೆತಿದ್ದಾರೆ ಎಂಬ ಕವಿತೆಯನ್ನು ಓದುವ ಚಿತ್ರದಲ್ಲಿ ವೀರಣ್ಣ ಮಂಠಾಳಕರ್.

ಗುರುವಾರ, ಏಪ್ರಿಲ್ 21, 2011

ಮಂಠಾಳಕರ್ ಅವರ ಸುಳಿಗಳು ಸಂಕಲನದಿಂದ ಆಯ್ದ ಕೆಲವು ಚುಟುಕುಗಳು


ಮಂಠಾಳಕರ್ ಅವರ ಸುಳಿಗಳು ಸಂಕಲನದಿಂದ ಆಯ್ದ ಕೆಲವು ಚುಟುಕುಗಳು 

ಮಂಠಾಳಕರ್ ಅವರ (ಸುಳಿಗಳು) ಕವನ-ಹನಿಗವನಗಳಸಂಕಲನ         
ಮಾನ್ಯರೆ,

ವೀರಣ್ಣ ಮಂಠಾಳಕರ್ ಅವರು ಮೊದಮೊದಲು ಬೀದರ ಜಿಲ್ಲೆಗೆ ಹೆಸರಾಂತ ಚುಟುಕು ಸಾಹಿತಿಯೆಂದೇ ಹೆಸರಾಗಿದ್ದರು. ಇತ್ತೀಚೆಗಷ್ಚೆ ಕಥೆ, ಕವನ, ಲೇಖನಗಳು ಬರೆಯುವುದರ ಮುೂಲಕ ಬಹುಮುಖ ಪ್ರತಿಭೆಯಾಗಿದ್ದಾರೆ, ಕಾವ್ಯದಲ್ಲಿ ವಿಶೇಷವಾದ ಆಸಕ್ತಿ ಹೊಂದಿರುವ ಇವರು ಪ್ರಸ್ತುತ ಪತ್ರಕತ೯ರಾಗಿ ಬಸವಕಲ್ಯಾಣದಲ್ಲಿ ಸೇವೆ ಸಲ್ಲಿಸುತಿದ್ದಾರೆ. ಇವರ ಅನೇಕ ಬಿಡಿ ಬರಹಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದವರಾದ ಇವರು ವಿವಿಧ ಆಸಕ್ತಿಗಳನ್ನು ಹೊಂದಿದ್ದಾರೆ. ಅನೇಕ ಬಿಡಿ ಬರಹಗಳನ್ನು ರಚಿಸಿದ್ದಾರೆ. ಇವರು 2005 ರಲ್ಲಿ ತಮ್ಮದೇ ಪ್ರಕಾಶನದಡಿಯಲ್ಲಿ ಸಂಕಲ್ಪ ಎಂಬ ಸಾಹಿತ್ಯ ಪತ್ರಿಕೆಯೊಂದನ್ನು ಆರಂಭಿಸಿದರು. ಪತ್ರಿಕೆಯ ಉದ್ದೇಶ ಯುವ ಬರಹಗಾರರನ್ನು ಗುರುತಿಸುವುದು, ಅವರಿಗೆಂದೇ ಪ್ರತ್ಯೇಕವಾದ ವೇದಿಕೆ ಕಲ್ಪಿಸಿಕೊಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮವಾದ ಸೇವೆ ಸಲ್ಲಿಸಿದವರನ್ನು ಹಾಗು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರ ಕುರಿತು ಬರೆಯುವುದರಿಂದ ಹಿಡಿದು ಮುಂತಾದ ಯೋಜನೆಗಳನ್ನು ಹಾಕಿಕೊಂಡಿದ್ದರು. ಕನಸುಗಳನ್ನು ಕೈಗೂಡದೆ ಸಂಕಲ್ಪ ಮಾಸ ಪತ್ರಿಕೆ ಆಥಿ೯ಕ ಮುಗ್ಗಟ್ಟಿನಿಂದ ಅನಿವಾಯ೯ ಕಾರಣಕ್ಕೆ ನಿಲ್ಲಿಸಬೇಕಾಯಿತು. ಇಲ್ಲಿಗೆ ಮಂಠಾಳಕರ್ ಅವರ ಆಸಕ್ತಿ ಕುಂದಲಿಲ್ಲ. ಕನಸುಗಳು ಗಗನದೆತ್ತರಕ್ಕೆ ಹಾರಾಡುತ್ತಲೆ ಇದ್ದವು. ಆ ಕಾರಣದಿಂದ ಎಲ್ಲೇ ಇದ್ದರೂ ಅವರಲ್ಲಿ ಸಂಕಲ್ಪ ಎಂಬ ಪದ ಚಿಗುಗೊಡೆಯುತ್ತಲೇ ಇತ್ತು ಅದರ ಒಂದು ಪ್ರತೀಕ ಇದೀಗ ವೀರಣ್ಣ ಮಂಠಾಳಕರ್ ಅವರು ತಮ್ಮ ಸ್ವ-ಸಾಮಥ್ಯ೯ದಿಂದ ಕಂಪ್ಯೂಟರ್ ಲೋಕವನ್ನು ಪ್ರವೇಶಿಸಿದ್ದಾರೆ. ತಮಗನಿಸಿದ್ದನ್ನು, ತಮ್ಮ ವಿಚಾರಕ್ಕೆ ಬಂದಿದ್ದನ್ನು ವೀರ ಸಂಕಲ್ಪ ಮತ್ತು ಕವಿ-ಕಲಾವಿದರು ಬ್ಲಾಗನಲ್ಲಿ ಅನಾವರಣಗೊಳಿಸುವ ಉದ್ದೇಶದಿಂದ ಅವರ ಒಂದು ಮಹತ್ವವಾದ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿನಂದಿಸೋಣ. ಮಂಠಾಳಕರ್ ಅವರ ಸುಳಿಗಳು ಕವನ ಸಂಕಲನ 2006 ರಲ್ಲಿ ಪ್ರಕಟಗೊಂಡಿದ್ದು ಸಂಕಲನದಿಂದ ಕೆಲವು ಆಯ್ದ ಚುಟುಕುಗಳು ನಿಮಗಾಗಿ....ಕೊಟ್ಟಿದ್ದೇವೆ. ಹಂತ-ಹಂತವಾಗಿ ಜಿಲ್ಲೆ, ರಾಜ್ಯ-ರಾಷ್ಟ್ರ ಕವಿಗಳು, ಕಲಾವಿದರ ಕುರಿತು ಈ (ಕವಿ-ಕಲಾವಿದರು) ಬ್ಲಾಗನಲ್ಲಿ ಪರಿಚಯಿಸುವ ಮಹತ್ವದ ಯೋಜನೆ ಇವರಲ್ಲಿ ಗರಿಗೆದರಿದೆ. ಅದಕ್ಕಾಗಿ ನಾವೆಲ್ಲ ಬೆಂಬಲಿಸೋಣ. ಅವರ ಜೊತೆಯಾಗಿ ಇರೋಣ. ಏನಂತಿರಾ...? ಓದಿ ಅಬಿಪ್ರಾಯ ಬರೆಯಿರಿ...............
      
                                                                 ನಿಮ್ಮ
                                                            ಅಕ್ಷರ ಪ್ರೇಮಿ




















ಸೋಮವಾರ, ಏಪ್ರಿಲ್ 18, 2011

ಕವಿ-ಕಲಾವಿದರ ಸಂಕ್ಷಿಪ್ತ ಪರಿಚಯ




ವೀರಣ್ಣ ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದಿಂದ ಆಯ್ದ ಕವಿತೆಗಳು

     ವೀರಣ್ಣ ಮಂಠಾಳಕರ್
ಮಂಠಾಳಕರ್ ಅವರು ಹೆಸರಾಂತ ಕವಿಯಾಗಿ, ಬೀದರ ಜಿಲ್ಲೆಯ ಪ್ರತಿಭಾವಂತ ಲೇಖಕರಲ್ಲಿ ಪ್ರಮುಖವಾಗಿ ಎದ್ದು ಕಾಣುವ ಇವರ ಆಸಕ್ತಿಗಳು ವಿಬಿನ್ನವಾಗಿ ಕಂಡು ಬರುತ್ತದೆ. ಪತ್ರಕತ೯ರಾಗಿ, ಸಂಪಾದಕರಾಗಿ, ಅಂಕಣ ಬರಹಗಾರರಾಗಿ, ಸೇವೆ ಸಲ್ಲಿಸಿರುವ ಇವರು ಕನ್ನಡ ಚಲನಚಿತ್ರದಲ್ಲಿ ಗೀತ ರಚನೆ ಮಾಡುವ ಸಂಕಲ್ಪವನ್ನು ಕೂಡ ಹೊಂದಿದ್ದಾರೆ. ಈಗಾಗಲೆ ನಾಲ್ಕು ಸ್ವರಚಿತ ಕವನ ಸಂಕಲನ ಹಾಗು ಬದುಕಿನ ಬೆನ್ನೇರಿ ಎಂಬ ಕಥಾ ಸಂಕಲನ ಪ್ರಕಟಿಸಿದ್ದಾರೆ. ವೀರಣ್ಣ ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದ ವಿಮಶೆ೯ ಕನ್ನಡಪ್ರಭ ಪತ್ರಿಕೆಯಲ್ಲಿ ನವೆಂಬರ್14ರಂದು ಅಕ್ಷರ ತೋರಣದಲ್ಲಿ ವಿಮಶೆ೯ಗೊಳಪಟ್ಟಿದೆ. ಇದರಿಂದ ಇವರ ವ್ಯಕ್ತಿತ್ವಕ್ಕೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿದೆ. ಯಾರೂ ಇವರನ್ನು ಗುರುತಿಸದಿದ್ದರೂ ಸ್ವ-ಸಾಮಥ್ಯ೯ ವ್ಯಕ್ತಿತ್ವದ ಮಂಠಾಳಕರ್ ಚುಟುಕು  ಸಾಹಿತ್ಯದಿಂದ ವಿಶೇಷವಾದ ಗಮನ ಸೆಳೆಯುತ್ತಾರೆ. ಅನೇಕ ಕವಿತೆಗಳು, ಕಥೆಗಳು, ಲೇಖನಗಳನ್ನು ರಚಿಸಿರುವ ಇವರು ಕೊಂದವರು ಮತ್ತು ಹಸಿವು ಎಂಬ ಎರಡು ಕಾದಂಬರಿ ರಚನೆಯಲ್ಲಿ ಇದೀಗ ತಲ್ಲೀನರಾಗಿದ್ದಾರೆ. ಸೂಕ್ತವಾದ ವೇದಿಕೆ, ಪ್ರೋತ್ಸಾಹಗಳನ್ನು ದೊರೆತರೆ ಉನ್ನತಮಟ್ಟದ ಬರಹಗಾರರಾಗಿ ಇವರು ಬೀದರ ಜಿಲ್ಲೆಗೆ ಹೆಸರಾಂತ ಸಾಹಿತಿಗಳಾಗಿ ಮುಂದೊರೆಯಲಿದ್ದಾರೆ ಎಂಬ ವಿಶ್ವಾಸ ಮಂಠಾಳಕರ್ ಅವರ ಬರವಣಿಗೆಯಿಂದ ತಿಳಿದು ಬರುತ್ತದೆ. ಇವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದಿಂದ ಒಂದಿಷ್ಟು ಆಯ್ದ ಕವಿತೆಗಳು ನಿಮಗಾಗಿ ಇಲ್ಲಿ ಕೊಡಲಾಗಿದೆ. ಓದಿ ಅಭಿಪ್ರಾಯ ಬರೆಯುತ್ತಿರಲ್ಲ...?
                       ಭಾಗ್ಯಶ್ರೀ ಹಾರಕೂಡೆ,ಹುಲಸೂರು ಬಸವಕಲ್ಯಾಣ