ಮಂಗಳವಾರ, ಜನವರಿ 22, 2013

ಲಾಲಮಹ್ಮದ್ ಬಂದೇನವಾಜ ಖಲೀಫ್ ಅಲ್ದಾಳ

ಹಾರಕೂಡದ `ಚೆನ್ನರೇಣುಕಬಸವ' ಪ್ರಶಸ್ತಿ ಪಡೆದ
ಲಾಲಮಹ್ಮದ್ ಬಂದೇನವಾಜ ಖಲೀಫ್ ಅಲ್ದಾಳ

-ಮಾಣಿಕ ಆರ್.ಭುರೆ
  
    `ಅದೇನು ಮಾಯೆಯೋ, ಅದೇನು ಮೋಹವೋ, ಅದೆಂಥ ಭಕ್ತಿಯೋ, ಅದ್ಯಾವ ಶಕ್ತಿಯೋ... ' ಎನ್ನುವ ಮಾತಿನಂತೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದ ಹಿರೇಮಠದಲ್ಲಿ ಅಂಥದ್ದೇನಿದೆಯೋ ಏನೋ, ಏಕೆಂದರೆ ಇಲ್ಲಿಗೆ ಒಮ್ಮೆ ಆಗಮಿಸಿದವರು ಪದೇ ಪದೇ ಬರುತ್ತಾರೆ. ಏನ್ಮಾಡೋದು ಹಾರಕೂಡ ಮಠ ಒಮ್ಮೆ ಹಿಡಿಯಿತೆಂದರೆ ಬಿಡುವುದಿಲ್ಲ ಎನ್ನುತ್ತಾರೆ. ಇಲ್ಲಿ ವರ್ಷದಲ್ಲಿ ಎರಡು ಸಲ ನಡೆಯುವ ಕಾರ್ಯಕ್ರಮಗಳಿಗಂತೂ ಯಾರೂ ತಪ್ಪಿಸಿಕೊಳ್ಳುವುದಿಲ್ಲ. ಸಾಹಿತಿ, ಸಂಗೀತಗಾರರು, ರಾಜಕೀಯ ಮುಖಂಡರು, ಕಲಾವಿದರು, ಗಣ್ಯರು ಪದೇ ಪದೇ ಹಾಜರಿ ಹಾಕುತ್ತಾರೆ.

    ಸಾಹಿತಿ, ಭಾಷಾವಿಜ್ಞಾನಿ, ಸಂಶೋಧಕರಾದ ಡಾ. ಸಂಗಮೇಶ ಸವದತ್ತಿಮಠ ಅವರು ಪಾಲ್ಗೊಳ್ಳದೆ ಇಲ್ಲಿ ಒಂದೂ ಕಾರ್ಯಕ್ರಮ ನಡೆದಿಲ್ಲ ಎನ್ನಬಹುದು. ನಾಟಕಕಾರ ಲಾಲಮಹ್ಮದ್ ಬಂದೇನವಾಜ ಖಲೀಫ್ ಅಲ್ದಾಳ (ಎಲ್‍ಬಿಕೆ ಅಲ್ದಾಳ) ಸಹ ಈ ಮಠದ ನಂಟು ಬೆಳೆಸಿಕೊಂಡವರಲ್ಲಿ ಪ್ರಮುಖರು. ಹಾಗೆ ನೋಡಿದರೆ, ಇಂಥವರು ಬರೀ ಇಲ್ಲಿಗೆ ಬಂದು ಹೋಗುವುದಿಲ್ಲ. ಇಲ್ಲಿನ ವಿವಿಧ ಸಾಂಸ್ಕøತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ, ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾರೆ.
   ಡಾ.ಸಂಗಮೇಶ ಸವದತ್ತಿಮಠ ಅವರು ಇಲ್ಲಿ ದಸರಾ ಹಬ್ಬದಂದು ನಡೆಯುವ ಲಿಂ.ಗುರುಲಿಂಗ ಶಿವಾಚಾರ್ಯರ ಪುಣ್ಯತಿಥಿಗೆ ಉಪನ್ಯಾಸ ಮಾಲೆ ನಡೆಯುವಲ್ಲಿ ಮತ್ತು ಗ್ರಂಥಗಳನ್ನು ಪ್ರಕಟಿಸುವ ಕಾರ್ಯದಲ್ಲಿ ನಿರಂತರವಾಗಿ ಸಹಕರಿಸುತ್ತ ಬಂದಿದ್ದಾರೆ. ಎಲ್‍ಬಿಕೆ ಅಲ್ದಾಳರು ಡಿಸೆಂಬರ್-ಜನವರಿಯಲ್ಲಿ ನಡೆಯುವ ಲಿಂ.ಚೆನ್ನಬಸವ ಶಿವಯೋಗಿಗಳ ಜಾತ್ರೆಯಲ್ಲಿ ನಾಟಕ ಆಡುತ್ತಾರೆ. ಶಿವಯೋಗಿಗಳ ಕುರಿತು ನಾಟಕ ಬರೆದಿದ್ದಾರೆ.

   ಹಾರಕೂಡ ಮಠವೂ ಇವರ ಸೇವೆಯನ್ನು ನಿರ್ಲಕ್ಷಿಸಿಲ್ಲ. ಮಠದಿಂದ 2011 ರಲ್ಲಿ ಆರಂಭಿಸಲಾದ `ಚೆನ್ನರೇಣುಕಬಸವ' ಎಂಬ ಮಹತ್ವದ ಪ್ರಶಸ್ತಿ ಕೊಡುವಾಗ ಪ್ರಥಮವಾಗಿ ಡಾ.ಸಂಗಮೇಶ ಸವದತ್ತಿಮಠ ಅವರನ್ನು ಪ್ರಶಸ್ತಿಗೆ ಪರಿಗಣಿಸಿದರೆ, ಎರಡನೇ ವರ್ಷದ ಪ್ರಶಸ್ತಿ ಅಲ್ದಾಳ ಅವರಿಗೆ ಕೊಡಲಾಗಿದೆ. ಇದಕ್ಕೂ ಮೊದಲು ಅಲ್ದಾಳ ಅವರ ಬಗ್ಗೆ ಅಭಿನಂದನಾ ಗ್ರಂಥ ಪ್ರಕಟಿಸಲಾಗಿದೆ.
    ಹೀಗೆ ಪ್ರತಿಭೆ, ನಿಷ್ಕಲ್ಮಷ ಭಕ್ತಿ ಮತ್ತು ಸೇವಾ ಮನೋಭಾವನೆಗೆ ಮಠಾಧಿಪತಿ ಚೆನ್ನವೀರ ಶಿವಾಚಾರ್ಯರು ಯಾವಾಗಲೂ ಮನ್ನಣೆ ಕೊಡುವ ಗುಣವೇ ಎಲ್ಲರನ್ನೂ ಇಲ್ಲಿಗೆ ಎಳೆದು ತರುತ್ತದೆ ಎಂದರೆ ತಪ್ಪಾಗಲಾರದು.
ಲಾಲಮಹ್ಮದ್ ಬಂದೇನವಾಜ ಖಲೀಫ್ ಅಲ್ದಾಳ


   ಲಿಂ.ಚೆನ್ನಬಸವ ಶಿವಯೋಗಿಗಳು ಸಹ ಯಾವುದೇ ಧರ್ಮ, ಜಾತಿ ನೋಡದೆ ಕಲಾವಿದರಿಗೆ ಮತ್ತು ತತ್ವಪದಕಾರರಿಗೆ ಪ್ರೋತ್ಸಾಹಿಸುತ್ತಿದ್ದರು. ಇಂದಿನ ಪೀಠಾಧಿಪತಿ ಸಹ ಆ ಸತ್ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. 2012 ನೇ ಸಾಲಿನ `ಚೆನ್ನರೇಣುಕಬಸವ' ಪ್ರಶಸ್ತಿಯನ್ನು ಅಕ್ಟೋಬರ್ 23 ರಂದು ಅಲ್ದಾಳ ಅವರಿಗೆ ಪ್ರದಾನ ಮಾಡಲಾಯಿತು. 25 ಸಾವಿರ ರೂಪಾಯಿ ನಗದು, 10 ಗ್ರಾಂ ಚಿನ್ನದ ಪದಕ ಮತ್ತು ಪ್ರಶಸ್ತಿ ಫಲಕವನ್ನು ಕೊಟ್ಟು ಸನ್ಮಾನಿಸಲಾಯಿತು.

    ಚೆನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀದರ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಮಾಜಿ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಎಂ.ಜಿ.ಮುಳೆ ಮತ್ತೀತರರು ಪಾಲ್ಗೊಂಡಿದ್ದರು.

    ಪರಿಚಯ: `ಚೆನ್ನರೇಣುಕಬಸವ' ಪ್ರಶಸ್ತಿ ಪಡೆದ ಎಲ್‍ಬಿಕೆ ಅಲ್ದಾಳರು ಮೂಲತಃ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದವರು. ಆದರೆ, ಚಿಕ್ಕಂದಿನಲ್ಲಿಯೇ ತಂದೆ ಮೃತಪಟ್ಟಿದ್ದರಿಂದ ಅವರು ತನ್ನ ತಾಯಿಯ ತವರೂರಾದ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಳ್ಳಿ ಗ್ರಾಮಕ್ಕೆ ಬಂದು ನೆಲೆಸಿದರು. ಈ ಊರನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿಸಿದರು.
     ಚಿಕ್ಕಂದಿನಿಂದಲೇ ನಾಟಕದಲ್ಲಿ ಪಾತ್ರ ಮಾಡುವ ಗೀಳು ಹಚ್ಚಿಕೊಂಡ ಅಲ್ದಾಳರು ಮುಂದೆ ತಾವೇ ಸ್ವತಃ ನಾಟಕ ರಚಿಸಿ ಆಡ ತೊಡಗಿದರು. ಅವರು ಇದುವರೆಗೆ `ಹಾರಕೂಡ ಶ್ರೀ ಚೆನ್ನಬಸವ ಶಿವಯೋಗಿ ಮಹಾತ್ಮೆ' `ಜೇವರ್ಗಿಯ ಜ್ಯೋತಿ ಷಣ್ಮುಖ ಶಿವಯೋಗಿ' `ಅಳ್ಳಳ್ಳಿಯ ಅಯ್ಯಪ್ಪ ಮಹಾತ್ಮೆ' `ಪತಿಭಕ್ತಿ' `ಕಲಿಯುಗದ ಕನ್ಯೆ'  `ನಮಸ್ಕಾರ' `ಬಾಳಿಗೊಂದು ಬೆಲೆ ಬೇಕು'  `ವಂಚಕ' ಮುಂತಾದ ಸಾಮಾಜಿಕ ಮತ್ತು ಶರಣರಿಗೆ ಸಂಬಂಧಿಸಿದ ನಾಟಕಗಳನ್ನು ರಚಿಸಿದ್ದಾರೆ. ಬಣ್ಣ ಹಚ್ಚಿಕೊಂಡು ಪಾತ್ರದಲ್ಲಿ ತನ್ಮಯರಾಗಿ ನಾಟಕ ಆಡಿದ್ದಾರೆ. ತಗಡಿನ ಮನೆಯಲ್ಲಿಯೇ ವಾಸಿಸುವಷ್ಟು ಬಡತನ
ಮನೆಯಲ್ಲಿದ್ದರೂ ತಮ್ಮ ಹವ್ಯಾಸವನ್ನು ಬಿಟ್ಟವರಲ್ಲ. ಮಠ- ಮಾನ್ಯಗಳ ಮತ್ತು ರಸಿಕರು ತೋರಿಸಿದ ಪ್ರೇಮ, ಗೌರವಕ್ಕೆ ಸದಾ ತಲೆಬಾಗಿ ನಿಂತವರು.
   ಇವರಿಗೆ ಸಂಘ ಸಂಸ್ಥೆಯವರು ಮತ್ತು ವಿವಿಧೆಡೆಯ ಮಠಗಳಿಂದ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗಿದೆ. ಜತೆಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಗುಬ್ಬಿ ವೀರಣ್ಣ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗಿದೆ.

   ಗೌರವ: ಹಾರಕೂಡ ಹಿರೇಮಠದಿಂದ ಇದುವರೆಗೆ ಸಾಹಿತಿಗಳಾದ ಶರಣಯ್ಯ ಪುರಾಣಿಕ, ಸೂಗಯ್ಯ ಹಿರೇಮಠ, ವಿ.ಎಸ್.ಚರಂತಿಮಠ, ಡಾ.ಎಂ.ಎಸ್.ಲಠ್ಠೆ, ಎಸ್.ಆರ್.ಗುಂಜಾಳ, ಶಿವರಾಜ ಪಾಟೀಲ ಕಲ್ಬುರ್ಗಿ, ಎಸ್.ಆರ್.ಶಾಸ್ತ್ರೀ, ಡಾ.ಸಂಗಮೇಶ ಸವದತ್ತಿಮಠ, ಡಾ.ಪಂಚಾಕ್ಷರಿ ಹಿರೇಮಠ, ಡಾ.ಎಸ್.ಎಂ.ಹಿರೇಮಠ, ಡಾ.ಮೀನಾಕ್ಷಿ ಬಾಳಿ, ಡಾ.ಬಿ.ಆರ್.ಹಿರೇಮಠ, ಡಾ.ಎಸ್.ವಿದ್ಯಾಶಂಕರ, ಡಾ.ಬಿ.ವಿ.ಮಲ್ಲಾಪುರ, ಗೋಪಿಕಾದೇವಿ ದೇಶಮುಖ, ಆಚಾರ್ಯ ನಂದೀಶ ಸೊಲ್ಲಾಪುರ, ಡಾ.ವೀರಣ್ಣ ರಾಜೂರ, ಮಲ್ಲಿನಾಥ ಹಿರೇಮಠ, ಎಚ್.ಕಾಶಿನಾಥರೆಡ್ಡಿ, ರಮೇಶಬಾಬು ಯಾಳಗಿ, ಷಣ್ಮುಖಯ್ಯ ಅಕ್ಕೂರಮಠ, ಡಾ.ಜಿ.ಎಂ.ನಾಗಯ್ಯ, ಡಾ.ಸಿ.ನಾಗಭೂಷಣ, ಡಾ.ಸೋಮನಾಥ ಯಾಳವಾರ, ಡಾ.ಶಾಂತಾ ಇಮ್ರಾಪುರ, ಬಸವರಾಜ ಪುರಾಣಿಕ, ಡಾ.ಸಿ.ಪಿ.ಕೆ, ಪ್ರೋ.ವೀರೇಂದ್ರ ಸಿಂಪಿ, ಡಾ.ಜಿ.ಬಿ.ವಿಸಾಜಿ ಭಾಲ್ಕಿ, ಡಾ.ಎ.ಸಿ.ವಾಲಿ, ಡಾ.ಮಲ್ಲಿಕಾರ್ಜುನ ಪರಡ್ಡಿ, ಎಲ್‍ಬಿಕೆ ಅಲ್ದಾಳ, ಡಾ.ಟಿ.ಎಂ.ಭಾಸ್ಕರ, ಡಾ.ಎಂ.ಜಿ.ನಾಗರಾಜ, ಡಾ.ಶಿವಕುಮಾರ ಸ್ವಾಮಿ, ರೇವಣಸಿದ್ಧಯ್ಯ ರುದ್ರಸ್ವಾಮಿಮಠ, ಡಾ.ಸಂಗಮೇಶ ಹಂಡಗಿ ಮುಂತಾದವರ 40 ಕ್ಕೂ ಹೆಚ್ಚಿನ ಗ್ರಂಥಗಳನ್ನು ಪ್ರಕಟಿಸಲಾಗಿದೆ.

   ಆದರೆ, ಇದರಲ್ಲಿ ಅಭಿನಂದನಾ ಗ್ರಂಥ ಮಾತ್ರ ಎಲ್‍ಬಿಕೆ ಅಲ್ದಾಳ ಅವರೊಬ್ಬರದೇ ಆಗಿದೆ. `ರಂಗಸಂತ ಜಂಗಮ' ಎಂಬ ವೈಶಿಷ್ಟ್ಯಪೂರ್ಣ ಮತ್ತು ಅರ್ಥಪೂರ್ಣವಾದ, ಮಹತ್ವದ ಅಭಿನಂದನಾ ಗ್ರಂಥ ಪ್ರಕಟಿಸಿ ರಂಗಕರ್ಮಿ ಅಲ್ದಾಳ ಅವರಿಗೆ ಮಠಾಧೀಶ ಚೆನ್ನವೀರ ಶಿವಾಚಾರ್ಯರು ಎಲ್ಲರಕ್ಕಿಂತ ಹೆಚ್ಚಿನ ಗೌರವ ಕೊಟ್ಟಿದ್ದಾರೆ. ಹೇಗೆ ಅಲ್ದಾಳರು ಸಹ ಮುಸ್ಲಿಂನಾದರೂ ತಮ್ಮ ಧರ್ಮದ ಕಟ್ಟುಪಾಡುಗಳನ್ನು ಮೀರಿ ಶರಣರ ಚರಿತ್ರೆಗಳನ್ನು ನಾಟಕವಾಗಿಸಿ ಅದರಲ್ಲೇ ಜೀವನ ಸಂತೃಪ್ತಿ ಕಂಡಿದ್ದಾರೋ, ಹಾಗೆಯೇ, ಹಾರಕೂಡ ಮಠ ಕೂಡ ಜಾತಿ ಮತದ ಎಲ್ಲೆಯನ್ನು ಮೀರಿ ಒಬ್ಬ ಉತ್ತಮ ಕಲಾವಿದನನ್ನು ಗೌರವಿಸಿದೆ ಎನ್ನಬಹುದು. 

-ಮಾಣಿಕ ಆರ್.ಭುರೆ
-----------  

ಸೋಮವಾರ, ಫೆಬ್ರವರಿ 27, 2012


ನಾನಾಗಿದ್ದರೆ ನೀ ತೊಡುವ....

--------------------------


1.)
ನಿನ್ನ ಮನದೊಳಗೆನೋ
ಒಂದು ಆಸೆ! ಪುಟಿಯುತ್ತಿದೆ
ಬರೆದು ಬಿಡಲೇ ಗೆಳತಿ
ನಿನ್ನ ದೖಷ್ಠಿಯಲ್ಲಿ ಬೆರೆತುಕೊಂಡಿರುವ
ಆ ಪ್ರೇಮ ಗೀತೆ, ಭಾಷೆ.?

ಮಾತಿಲ್ಲದ ಮೌನದಲ್ಲಿ

ನಿಂತ ನಿನ್ನ ಭಂಗಿ
ಮುಗ್ಧ ಚೆಲುವೆಯ ಸ್ನಿಗ್ಧ ನಗುವು
ಕಂಡು, ಚಿಗುರೆಲೆಗಳೊಂದಿಗೆ
ಮೈದುಂಬಿಕೊಂಡು ನಿಂತ
ಹೂ ಗಿಡವೂ ಕೂಡ ನಾಚಿಕೊಂಡಿದೆ!
ನಿನ್ನ ನೋಡಿ ತನ್ನ ಚೆಲುವನ್ನೆಲ್ಲಾ
ಮುಚ್ಚಿಕೊಂಡಿದೆ.

ನಿನ್ನ ಹಾಗೇ ಹೊಸ ಹುರುಪು

ಹೊಸ ಉತ್ಸಾಹ, ಉಲ್ಲಾಸ
ಹೊತ್ತು ತಂದಿದೆ...
ಹೂವಿಗಿಂತಲೂ ಚೆಲುವೆ ನೀನು
ಹೂ... ಯಾಕೆ ಬೇಕು ನಿನಗೆ
ಒಂದೂ ತಿಳಿಯದು...!

ಇಬ್ಬನಿಯು ಮೂಡುವಾಗ

ಮೌನ ಮುರಿದು ಬಾರೇ ಚೆಲುವೆ
ಅಂದಗಾತಿ ಹೆಣ್ಣೆ... ಚೆಂದವಾದ
ನಿನ್ನಾ ಕಣ್ಣ ಹೊಳಪಿನಾ ಕಣ್ಸನ್ನೇ.....
ನೀಡುವಾಗ ಸ್ನೇಹಕ್ಕೆ ಸೂಚನೆ
ನೀ ಬರುವ ಹಾದಿಯಲ್ಲಿ ಚೆಲ್ಲಿರುವೆ
ಹೂ ಹಾಸಿಗೆ.... ಹೂವಿನಂಥ ಮನಸ್ಸಿಗೆ||
-------


2.)


ಉಸಿರೇ ನೀ ಮೌನವಾಗಿರಬೇಡ

ನನ್ನ ಉಸಿರಾಟ ನಿಂತು ಹೋದಿತ್ತು
ನಿನ್ನ ಬಿಟ್ಟು ನನಗ್ಯಾರಿಲ್ಲ
ನೀನೇ ನನ್ನ ಜೀವ ಎಂದಿತು.

ನಿನ್ನ ಸ್ಪಶ೯, ಬಿಸಿ ಉಸಿರಾಟ

ದಿನವೂ ನೀನು ಬರೆದಂತೆಲ್ಲಾ
ನಿತ್ಯ ಸುಮಂಗಲಿಯ ಹಣೆಯ ಮೇಲೆ
ಶೋಭಿಸುವಂತೆ ಕುಂಕುಮ
ನನ್ನ ನಿನ್ನಾ ಈ ಬಂಧನ

ನಿನ್ನ ಕೈ ಹಿಡಿದು ನಡೆಸುವವನ

ಮನದ ಭಾವನೆಗಗಳು ಅದೇಷ್ಟು ಛಂದ
ಅದಕ್ಕಾಗಿಯೇ ನಮ್ಮಿಬ್ಬರಲ್ಲಿ ಈ ಬಂಧ||!

ನಮ್ಮಿಬ್ಬರನ್ನು ಯಾರೂ....

ಎಂದಿಗೂ ದೂರ ಮಾಡರು
ಒಂದು ವೇಳೆ ದೂರ ಮಾಡಲು
ಹೊರಟವರ ಬಾಳಿನಲ್ಲಿ
ಇರುವುದಿಲ್ಲ ಆಸೆ ಕನಸುಗಳ ಸೂರು.

3.)

ಕಣ್ಣಿನಿಂದ ನೋಡದೇ
ಹೖದಯದಲ್ಲಿ
ಸೇರಿಕೊಳ್ಳುವ ನೆನಪುಗಳು
ಪ್ರೀತಿಯೇನು ಗೆಳತಿ

ಅಂತರಂಗವೆಂಬ ನೋಟದಲ್ಲಿ

ಕಾಣುವ ವೈಭವ
ಸ್ಪಶ೯ದ ಅನುಭವ
ಪ್ರೀತಿಯೇನು ಗೆಳತಿ

ಹೇಳು ಪ್ರೀತಿಯೆಂದರೇನು

ಮೊಬೈಲ್ ನಿಂದ ಮೊಬೈಲ್ ಗೆ
ಬರುವ ಮಿಸ್ಡ್ ಕಾಲ್! ಒಂದು ಪುಟ್ಟ ಸಂದೇಶ
ಗೊತ್ತು ಪರಿಚಯವಿಲ್ಲದವರು
ಕಳುಹಿಸಿದಾಗ ಪ್ರೀತಿಯೇನು ಗೆಳತಿ..?

ನೂರು ಭಾವ ಪ್ರತಿಬಿಂಬಿಸುವ

ಒಂದು ಸಾಲಿನ ಪುಟ್ಟ ಸಂದೇಶ
ಸೖಷ್ಟಿಸುವ ಅವಾಂತರ
ಪ್ರೀತಿಯೇನು ಗೆಳತಿ....?
ಹೇಳು ಪ್ರೀತಿಯೆಂದರೇನು
------
ಈ.. ಕವಿತೆ 2006 ರಲ್ಲಿ ಪ್ರಕಟವಾದ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದಿಂದ ಆಯ್ದದ್ದು. ಕನ್ನಡಪ್ರಭ ದ ನವೆಂಬರ್ 2010 ರಲ್ಲಿ ಅಕ್ಷರ ತೋರಣದಲ್ಲಿ ಮತ್ತು ಇತ್ತೀಚಿಗೆ ಮಾನಸ ಪತ್ರಿಕೆಯಲ್ಲಿ ಸೆಪ್ಟೆಂಬರ್ 2011 ರಲ್ಲಿ ವಿಮಶೆ೯ಗೊಳಪಟ್ಟಿದೆ.



ಶುಭ ಮುಂಜಾನೆಯ

ಸವಿ ಸವಿ ನೆನಪುಗಳ
ಸಂದೇಶವಿದೋ...
ಮಧು ತುಂಬಿದ
ಶ್ರೀಯವರಿಗೆ... ಶುಭವಾಗಲಿ.


ಮನಸ್ಸೊಂದು ಕನ್ನಡಿ

ಬಂದು ಹೋಗುವವರನ್ನೆಲ್ಲಾ
ಸೆರೆ ಹಿಡಿದು...
ಬಿಟ್ಟುಬಿಡುವ ಪೊಲೀಸ್
ಕಸ್ಟಡಿಯಲ್ಲ.....
ಚಿರ ಶಾಶ್ವತವಾಗಿರುತ್ತವೆ.

ಸುಂದರ ನೆನಪುಗಳು

ಮನಸ್ಸಿನ ಹಂದರದಲ್ಲಿ
ಬೇರೂರಿ ಬಿಟ್ಟಾಗ...
ಇತರರನ್ನು ನಾವು
ನೋಡಿದಾಗ ಅವರು ನಮಗೆ
ನೋಡಿದಾಗಲೂ, ಎಲ್ಲರೂ
ಸುಂದರವಾಗಿಯೇ ಕಾಣುತ್ತೇವೆ
ವಿಷಾದವೆಂದರೆ...?
ನಮ್ಮ ಒಳ ವೇದನೆಗಳನ್ನು
ಅರಿಯದೇ ಮರೆಯುತ್ತೇವೆ.
ಅಷ್ಟೇ.



ನಿನ್ನ ನೆನಪುಗಳೆಂದರೆ

ನನ್ನೀ ಎದೆಯ ಗೂಡಿನಲ್ಲಿ
ಚಿಲಿಪಿಲಿ ಗುಟ್ಟುವ ಹಕ್ಕಿಗಳ ಹಸಿವು

ನಿನ್ನ ನೆನಪುಗಳೆಂದರೆ ಗೆಳತಿ

ಕಾಣದ ದೇವರನ್ನು ಧ್ಯಾನಿಸುತ್ತ
ಧ್ಯಾನದಲ್ಲಿ ಲೀನವಾಗಿ ವರವೊಂದು
ಪಡೆದ ಖುಷಿ ಸಂಭ್ರಮ

ನಿನ್ನ ನೆನಪುಹಳೆಂದರೆ

ಕಣ್ಗಳ ಬಿಂಬದಲ್ಲಿ
ಕಾಣುವ ಕನಸಿನ ಪಯಣ

ನಿನ್ನ ನೆನಪುಗಳೆಂದರೆ ಗೆಳತಿ

ಕವಿಯ ಭಾವ ತರಂಗದಲ್ಲಿ
ತೇಲಾಡುವ ಮನಸಿನಂತರಂಗದ
ವಿಚಿತ್ರ ಕಲ್ಪನೆಗಳು

ನಿನ್ನ ನೆನಪುಗಳೆಂದರೆ

ಮುಂಜಾನೆಯೆದ್ದು ನಸುನಕ್ಕು
ನಾಚುತ್ತ, ಅಂಗಳದಲ್ಲಿ ಬಂದು
ರಂಗೋಲಿ ಬಿಡಿಸಿ
ಹೋದ ಹುಡುಗಿ

ನಿನ್ನ ನೆನಪುಗಳೆಂದರೆ ಗೆಳತಿ

ಈ ಕವಿತೆಯ ಜೀವ ಭಾವದಲ್ಲಿ
ಒಂದಾಗಿ, ನಿನಗಾಗಿರುವ
ನನ್ನುಸಿರಿನ ಧ್ವನಿ

ನಿನ್ನ ನೆನಪುಗಳೆಂದರೆ

ದಡಮುಟ್ಟಿ ಹಿಂತಿರುಗಿ
ಹೋಗುವ ಅಲೆಗಳಂತೆ
ನಿನ್ನಾ ನೆನಪುಗಳು.... ಗೆಳತಿ
------------



ದೂರವಿರು ಹತ್ತಿರ ಸುಳಿಯಬೇಡ

------------------------------

ದೂರವಿರು ಹತ್ತಿರ ಸುಳಿಯಬೇಡ

ಮನಸ್ಸಿನ ಭಾವನೆಗೆ ಸುಳಿಯಾಗಬೇಡ
ಮರೆತು ಮಾತು ತೆರೆದ ಪುಯ ಆಗಬೇಡ
ನಿನ್ನ ಬರವಸೆಗಳಿಗೆ ನೊಂದಿರುವೆ
ಆರದ ಗಾಯದ ಮೇಲೆ ಬರೆಯಾಗಬೇಡ

ದೂರವಿರು ಹತ್ತಿರ ಸುಳಿಯಬೇಡ

ಕನಸಿನ ಕಣ್ಣಿನ ಸ್ವಪ್ನ ಸುಂದರಿಯಾಗಬೇಡ
ವಿಷ ಸಪ೯ ನೀನು, ಗಾಳಿಯಂತೆ ಸುಳಿಯಬೇಡ
ತಂಗಾಳಿ ಬೀಸಿ ಜ್ವಾಲಾಮುಖಿಯಂತೆ...?
ಮನಸ್ಸಿನನಾಳಕ್ಕಿಳಿದು ಬೆಂಕಿ ಹಚ್ಚಬೇಡ

ದೂರವಿರು ಹತ್ತಿರ ಸುಳಿಯಬೇಡ

ನೀ ನನ್ನ ಬಾಳಿನ ಬತ್ತಿಯ ಹಣತೆಬಾಗಬೇಡ
ನಿನ್ನಾ ಹಣತೆಯೊಳಗೆ ನನ್ನ ರಕ್ತ ಸುರಿದು
ನನ್ನನ್ನೇ ಬತ್ತಿಯಾಗಿ ಹೊಸೆದು
ಬೆಳಕು ಕಾಣಬೇಡ.....
ಬೆಳಕಿನಡಿಯ ಕತ್ತಲು ನೀನೆಂಬುದು
ಮರೆಯಬೇಡ...!

ದೂರವಿರು ಹತ್ತಿರ ಸುಳಿಯಬೇಡ

ನಾ ಸತ್ತರೂ ಸ್ಮಶಾನಕೊಯ್ಯಬೇಡ
ನನ್ನ ಶವದ ಸುತ್ತ ಕಣ್ಣೀರು ಸುರಿಸಬೇಡ
ಮತ್ತೆ ಶವದ ಬತ್ತಿ ಹೊಸೆದು ಹಣತೆಯಾಗಬೇಡ
ನನ್ನ ಸುಟ್ಟ ರಕ್ತವೇ ಸುರಿದು
ದೀಪ ಹಚ್ಚಬೇಡ...

- ಈ ಕವಿತೆ ಕಮ೯ವೀರ ವಾರ ಪತ್ರಿಕೆಯಲ್ಲಿ ದಿನಾಂಕ, 26 ಜುಲೈ 2007 ರಲ್ಲಿ ಪ್ರಕಟಗೊಂಡಿರುತ್ತದೆ. ಇದೇ ಕವನ ನನ್ನ ಗಾಂಧಿ ಆಗ್ಬೇಕಂದುಕೊಂಡಾಗ ಸಂಕಲನದಲ್ಲಿ ಸೇರಿದ್ದು ಕೂಡ.




ಸಾವು.............

--------------
ದಿನವೂ ಸತ್ತು ಬದುಕುತ್ತೇವೆ
ಏತಕ್ಕೆ....?
ಒಮ್ಮೆ ಹುಟ್ಟಿದ ಬಳಿಕ
ಸಾವೆಂಬುದು ಖಚಿತವಲ್ಲವೇ
ಈ ದೇಹಕ್ಕೆ

ಮತ್ಯಾಕೆ ಈ ಉಸಿರಾಟ

ಬದುಕು, ಮಲಗಿದಾಗ
ಭುಸುಗುಡುವ ಸಾವು...!?

ಮೈಚಾಚಿ ಉದ್ದಕ್ಕೆ

ವಿವಿಧ ಭಂಗಿಗಳಲ್ಲಿ ನಾವು
ದಿನವಿಡೀ ದುಡಿದು
ದಣಿದ ದೇಹಕ್ಕೆ
ವಿಶ್ರಾಂತಿಯ ನೆಪವೊಡ್ಡಿ

ಜೋಗುಳವನ್ನು ಹಾಡಿ

ಮಲಗಿಸುವ ಆ ಸಾವಿಗೆ
ಮೆಚ್ಚಲೇಬೇಕು....
ಅದರ ಬುದ್ಧಿಗೆ

ಇರಬಹುದು ನಮಗೆಲ್ಲ

ಸಾವಿನ ಆಹ್ವಾನಕ್ಕೆ
ಎಚ್ಚರಿಕೆಯ ಕರೆಯೋಲೆ
ಇಣುಕಿ...ಇಣುಕಿ ನೋಡುವ
ಬೆಳಕು ಕತ್ತಲಿನ ನಡುವೆ
ಬಚ್ಚಿಟ್ಟುಕೊಂಡ ಹೇ ಸಾವೇ...!!!!!!!!!


ಕಮ೯ವೀರ ವಾರ ಪತ್ರಿಕೆಯಲ್ಲಿ ದಿನಾಂಕಃ 29 ಜುಲೈ 2007 ರಂದು ಹಾಗೂ ಸಂಯುಕ್ತ ಕನಾ೯ಟಕ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ. ಇದೇ ಕವನ ನನ್ನ ಕವನ ಸಂಕಲನದಲ್ಲಿ ಕೂಡ.


ನಾನು ಮತ್ತು ಸಾವು

------------------

ಒದಗಿ ಬಂದಾಗ ಈ ದೇಹಕ್ಕೆ

ಉಸಿರಾಟ ನಿಂತು ಹೋದಾಗ
ಸಾವಿನ ಸನಿಹಕ್ಕೆ ಬಂದು
ಕುಳಿತು ಮಾತಾಡುವ ಬಯಕೆ

ಹೆದರಬೇಡ ಸಾವೇ

ನಿನ್ನ ಕುರಿತು
ಬರೆಯುತ್ತೇನೆಂದು
ಒಂದು ಕವಿತೆ
ಕೇಳು ಬಾ ಇಲ್ಲೊಂದಿಷ್ಟು
ನನ್ನ ಜೀವನದ ಕಥೆ-ವ್ಯಥೆ

ಯಾರು ನೀನು...?

ಅದೇಕೆ ಅಷ್ಟೊಂದು ಅಗೋಚರ
ವಿಸ್ಮಯ! ಭಯಂಕರ ನೀನು

ಬಾ ಕುಳಿತುಕೋ

ಮಾತು, ಕತೆ, ಚಚೆ೯, ಸಂವಾದ
ನಡೆಯಲಿ ನಮ್ಮಿಬ್ಬರ ನಡುವೆ
ಒಂದಿಷ್ಟು ಕಾಫಿ, ಚಹಾದ ಸ್ವಾದ
ಸವಿಯೋಣ, ಬಂದಂಥ ನೆಂಟರಿಷ್ಟರ
ನಡುವೆ ನಾವಿಬ್ಬರೇ...

ಬಂಧು ಬಾಂಧವ್ಯದ ನಡುವೆ

ಏನೋ ವಾದ ವಿವಾದ ನಡೆಯುತ್ತಿದೆ
ನಾನೇನು ಮಹಾ ಕವಿಯಲ್ಲ
ಸಾಮಾನ್ಯ ಒಬ್ಬ ಮನುಜ
ಹುಟ್ಟುವಾಗಲೇ ನಿನ್ನೊಂದಿಗೆ
ಗೆಳೆತನ ಬೆಳದದ್ದು ಸಹಜಃ ನಮ್ಮಿಬ್ಬರದ್ದು
ಮುರಿಯದ ಬಂಧನವೆಂಬುದು ಕೂಡ ನಿಜ

ನನ್ನ ಕವಿತೆಗಳಿಗೆ ಮೂಲ ಪ್ರೇರಣೆಯೆಂದರೆ

ಆಸೆ, ನಿರಾಸೆ, ಭಗ್ನ ಪ್ರೀತಿ
ನಂತರ ವಸ್ತುಗಳನ್ನಾಗಿಸಿಕೊಂಡಿದ್ದು..?!
ಮುರಿದು ಬಿದ್ದ ಕನಸು, ಬಡತನ
ಶಾಶ್ವತ ನಮ್ಮಿಬ್ಬರದೇ ಗೆಳೆತನ.

-----------


ಸಾವಿಲ್ಲದ ಮನೆ ಯಾರೂ ಕಟ್ಟಿಕೊಳ್ಳುವುದಿಲ್ಲ

------------------------------------------

ನಾನು ಇಲ್ಲಿಗ್ಯಾಕೆ ಬಂದೆ

ಎಲ್ಲೆವನು ಅನಾಥವಾಗಿ ಬಿಟ್ಟು
ಹೋಗಿರುವ ತಂದೆ

ಈ ಭೂಮಿ, ಪ್ರಕೖತಿ, ಪರಿಸರ

ಇಲ್ಲಿರುವ ಜನ ಎಷ್ಟೊಂದು ಅವಸರ
ಇರಬಹುದು ಇಲ್ಲವೂ ಮುಖವಾಡಗಳ ಚಿತ್ರ

ಬರುವಾಗ ಹೆತ್ತವವ್ವಳಿಗೆ

ನೋವು ಕೊಟ್ಟು ಬಂದೆ
ಇದಕ್ಕೆಲ್ಲ ಕಾರಣ ಆ ನನ್ನ ತಂದೆ
ಹುಟ್ಟಿಸಿದವನು ಇಲ್ಲಿ ಶಾಶ್ವತವಾಗಿ ಉಳಿಯಲಿಲ್ಲ
ಹುಟ್ಟಿರುವ ನನಗೂ ಬದುಕಲು ಬಿಡಲಿಲ್ಲ
ಬಾಳೊಂದು ಕಡಲಲ್ಲಃ ಬರಿದಾದ ಭೂಮಿಯಂತೆ ನಾವೆಲ್ಲ

ಈ ದೇಹದೊಳಗೆ ಉಸಿರಾಟ ಇರೋತನಕ

ಜೀವನ
ಎಲ್ಲವೂ ಮುಗಿದ ಬಳಿಕ ಬರೀ ಮೌನ
ಮನುಷ್ಯನ ಕೊನೆಯ ಆಸೆಯೆಂಬುದೇ ಆ ಸ್ಮಶಾನ!

ಈ ಭೂಮಿಯಿಂದ ನಾನು ಅಗಲಿದ ಬಳಿಕ

ಮಾಡಿಕೊಳ್ಳುತ್ತಾರೆ ಇದ್ದವರು ಶುಚಿಯಾದ ಝಳಕ
ಕಳೆದು ಹೋಯಿತೇ..?
ಅವರ ಮೈಮೇಲಿನ ಮೈಲಿಗೆ ಮತ್ತು ಸೂತಕ

ಅಗಲಿ ಹೋದವರು ಮತ್ತೆ ಮರಳಿ ಬರಲಿಲ್ಲ

ಇಲ್ಲಿದ್ದವರು ಯಾರೂ ಅಮರವಾಗಿ ಉಳಿಯಲಿಲ್ಲ
ಸಾವಿಲ್ಲದ ಮನೆ ಯಾರೊಬ್ಬರೂ ಕಟ್ಟಿಕೊಳ್ಳುವುದಿಲ್ಲ.

-ಗಾಂಧಿ ಆಗ್ಬೇಕಂದುಕೊಂಡಾಗ ನನ್ನ ಕವನ ಸಂಕಲನದಲ್ಲಿ ಸೇರಿಕೊಂಡ ಅಪರೂಪದ ಸಾವಿನ ಕುರಿತಾದ ಕೆಲವು ಕವಿತೆಗಳು ನಿಮಗೆ ಹೇಗನ್ನಿಸಿದವು ಎಂಬುದಕ್ಕೆ ಒಂದೆರಡು ಸಾಲು ಬರೆಯಲು ಮರೆಯಬೇಡಿ. ಅದೇ ನಿಮ್ಮ ಪ್ರೋತ್ಸಾಹವೇ ಕವಿಗೆ ಸ್ಫೂತಿ೯.


-------


ಸಾವಿನೊಂದಿಗೆ ಸರಸ

----------------------

ಸಾವೇ ಬರುವುದಾದರೆ ಬಾ

ನಿನ್ನ ಭಯವಿಲ್ಲ ನನಗೆ
ಬಣ್ಣ, ಬಣ್ಣದ ಚೆಂದ-ಗಂಧದ
ಹೂವಿನಲಂಕಾರವ ಮಾಡಿ ಮಲಗಿಸುವೆ
ಚಿರ ನಿದ್ರೆಗಾಗಿ ಜೋಗುಳವನ್ನು ಹಾಡಿಸುವೆ

ಘಮ-ಘಮಿಸುವ ಹೂ-ದಳಗಳು

ಎದ್ದು, ಕೇಕೆ ನಗುತ್ತಿರಬೇಕು....
ಹಾಗೇ ಸುತ್ತಲೂ ಕುಳಿತವರ ಕಂಡು
ಹೂವಿನ ಹಾರಗಳು ಕೇಕೆ ಹಾಕುತ್ತಿರಬೇಕು
ನಿನ್ನತ್ತ ಎಲ್ಲರೂ ಕೈ ಮಾಡಿ ತೋರಿಸುತ್ತಿರಬೇಕು..!

ಸಾವೇ ಬರುವುದಾದರೆ ಬಾ..

ನನ್ನ ಬಂಧು ಬಳಗಕ್ಕೆಲ್ಲ ಸಂತೈಸುವ ಶಕ್ತಿ
ನಿನ್ನಲ್ಲಿದ್ದರೆ....
ಒಮ್ಮೆ ಅವರ ಮನಸ್ಸಿನ ನೋವುಗಳನ್ನೆಲ್ಲಾ
ಹಗುರಗೊಳಿಸುವುದಾದರೆ
ಬದುಕುವ ಭರವಸೆಯಲ್ಲಿ ಸಾಂತ್ವನ
ತುಂಬಬಹುದಾದರೆ...


ಸಾವೇ...

ಬರುವುದಾದರೆ ಬಾ
ನೀ ಬಂದು ಹೋಗುವ ನಡುವೆ
ಎಷ್ಟೊಂದು ರಗಳೆ, ಕಂಗೆಟ್ಟ ಕಳೆ.?
ನಿನ್ನನ್ನು ಕುರಿತು ರೋಧಿಸುವವರ ಮೌನ ಕವಿದ ಮುಖದಲ್ಲಿ...
ನಗು, ಉಲ್ಲಾಸ ತಂದು ಕೊಡುವುದಾದರೆ.!
ಬರುವುದಾದರೆ ಬಾ....


ಈ ಎಲ್ಲಾ ಕವಿತೆಗಳು ನನ್ನ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲದಲ್ಲಿ ಸೇಪ೯ಡೆಗೊಂಡಿರುತ್ತವೆ. ಈ ಕವನ ಸಂಕಲನ ರಾಜ್ಯ ಮಟ್ಟದ ಪತ್ರಿಕೆ ಕನ್ನಡಪ್ರಭ ದಲ್ಲಿ ಕೂಡ ವಿಮಶೆ೯ಗೊಳಪಡಿಸಿದೆ.



ಆ ಚಂದ್ರನ ಬೆಳಕನ್ನು ಕಂಡು

ಒಣಗಿದ ಮರವೊಂದು ಹೇಳಿತ್ತು
ಬರದ ನಾಡಿನಲ್ಲಿ ಪ್ರೇಮಿಗಳಿಗೆ ನೆರಳಿಲ್ಲ
ಅವರ ಕುಶಲೋಪರಿಗೆ ಕವಿಯಾಗುವ
ಪರಿಸರವೂ ಸಧ್ಯಕ್ಕಿಲ್ಲ..
ಬೆಳಕ್ಕಾಗಿ ನೀ ಬಂದರೂ ನೆರಳಾಗಿ
ಇರಲು, ನನ್ನಲಿಲ್ಲ ಹಸಿರೆಲೆಗಳ ಸಂಪತ್ತು.
ಹರಿಯುವ ಸಾಗರವು ಹೇಳಿತ್ತು
ಪ್ರೇಮಿಗಳು ನನ್ನ ಎದೆಯ ಅಂಗಳದಲ್ಲಿ
ಈಜಾಡಬಹುದೆಂದು.....
ಪ್ರೇಮವೆಂಬ ಲೋಕದಲ್ಲಿ ಈಜಾಡಲು ಬಾರದವರು
ಮುಳುಗಬಹುದು ಕೂಡ ಎಂದು ಹೇಳಿತ್ತು.
-----------------

ನನ್ನ ಮನಸ್ಸನ್ನು ಕದ್ದವಳು
ಎಲ್ಲಿರುವಳೋ ಗೊತ್ತಿಲ್ಲ
ಹುಡುಕಿ ಕೊಟ್ಟವರಿಗೆ
ಬಹುಮಾನವುಂಟು
ಹುಡುಕಿ ಕೊಡದವರ
ಮೇಲೆ....?
ಅನುಮಾನವುಂಟು..!!

<span title=ವೀರಣ್ಣ ಮಂಠಾಳಕರ್">

ಗಾಂಧಿ ಆಗ್ಬೇಕಂದುಕೊಂಡಾಗ
------------------------------

ಗಾಂಧಿ ಆಗ್ಬೇಕಂದುಕೊಂಡಾಗ

ತುಂಡು ಬಟ್ಟೆಯಲ್ಲಿ ತಿರಗಾಡ್ಬೇಕಲ್ಲ
ಜನ ನನ್ನ ನೋಡಿ ಬೆತ್ತಲೆ ಕತೆ
ಕಟ್ಟುತ್ತಾರೆಂಬ ಚಿಂತೆ...!

ಗಾಂಧಿ ಆಗ್ಬೇಕಂದುಕೊಂಡಾಗ

ಕೋಲು ಹಿಡಿದು ತಿರಗಾಡ್ಬೇಕಲ್ಲ
ಕೋಲು ಕಂಡ ಜನ, ಕೋಲಾಹಲ
ಎಬ್ಬಿಸುವರೆಂಬ ಚಿಂತೆ..!

ಗಾಂಧಿ ಆಗ್ಬೇಕಂದುಕೊಂಡಾಗ

ಬೋಳು ತಲೆಯಲ್ಲಿ ತಿರಗಾಡ್ಬೇಕಲ್ಲ
ಬಿಸಿಲು ಧಗೆಯಲ್ಲಿ ಜನ, ಮೊಟ್ಟೆ ಬೇಯಿಸಿ
ಹೊಟ್ಟೆ ತುಂಬಿಸಿಕೊಳ್ಳುತ್ತಾರೆಂಬ ಚಿಂತೆ..!

ಗಾಂಧಿ ಆಗ್ಬೇಕಂದುಕೊಂಡಾಗ

ದಪ್ಪ ಕನ್ನಡಕ ಕಣ್ಣಿಗೆ ಹಚ್ಚಬೇಕಲ್ಲ
ಕನ್ನಡಕ ಕಂಡ ಜನ, ಕಣ್ ಕಾಣ್ಸೋದಿಲ್ಲಂತ
ತಿಳಿದು, ಕಂಡಲ್ಲಿ ಗುಂಡಿಟ್ಟು ಕೊಲ್ಲುತ್ತಾರೆಂಬ ಚಿಂತೆ.!

ಗಾಂಧಿ ಆಗ್ಬೇಕಂದುಕೊಂಡಾಗ

ನನ್ನ ಅಂಥಾವ್ರೆ ಜಗದ ತುಂಬೆಲ್ಲ
ಗಸ್ತು ತಿರುಗುತ್ತಾ, ಸತ್ಯ ಶೋದನೆಗೆ
ಗುಂಡಿಟ್ಟು ಕೊಲ್ಲಲು, ಹುಡುಕಾಟ ನಡೆಸುತ್ತಾರೆಂಬ ಚಿಂತೆ...!!


-ಈ ಕವಿತೆ 2011 ರಲ್ಲಿ ನನ್ನ ಸ್ವರಚಿತ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲದಲ್ಲಿ ಪ್ರಕಟಗೊಂಡಿದ್ದು, ವಿವಿಧ ಪತ್ರಿಕೆಗಳಲ್ಲಿ ವಿಮಶೆ೯ಗೊಳಪಟ್ಟ ವಿಶೇಷ ಕವಿತೆ ಕೂಡ.

---------------

ನೀನಿಲ್ಲದೇ ನಾ ಹೇಗಿರಲಿ
ನಿನ್ನಿಂದಲೇ ನಾ ಬದುಕಿರಲಿ
ಇರುವತನಕ ಈ ಬಾಳ ದೋಣಿಯಲ್ಲಿ
ಕನಸುಗಳ ಸರಮಾಲೆ
ಹೊತ್ತುಕೊಂಡು ನಿನಗೇನು ತರಲಿ
ಹೇಳು ಗೆಳತಿ ನಿನ್ನ ಬಿಟ್ಟು
ನಾ... ಹೇಗೆ ಬದುಕಲಿ...
ಈಜುವ ಸಾಗರದಲ್ಲಿ....
ನಿನ್ನ ನೆನಪುಗಳೇ ತುಂಬಿರಲಿ...!!

-------------

ನಾನಾಗಿದ್ದರೆ ನೀ ತೊಡುವ....
--------------------------

ನೀ ತೊಡುವ ಬಳೆಗಳ ಕೈ

ನಾನಾಗಿದ್ದರೆ ಗೆಳತಿ
ನಾಜೂಕಾದ ಬಳೆಗಳು
ಚೂರಾಗದಂತೆ ಉಡುಗೋರೆಯಾಗಿ
ಕೊಟ್ಟು ಸಂಭ್ರಮಿಸುತಿದ್ದೆ
ನಯವಾದ ಕೈಗಳಾಗಿ ಶೋಭಿಸುತಿದ್ದೆ
ನಿನ್ನ ಮುಖದಲ್ಲಿ ಮಂದಹಾಸ ನಗುವನ್ನು ತರುತಿದ್ದೆ...!

ನುಣುಪಾದ ನಿನ್ನ ಕೆನ್ನೆ

ಅದೇ ಕೈಗಳಿಂದ ಸವರುತಿದ್ದೆ
ಆ ಬಳೆಗಳ ನಾದದಲ್ಲಿ
ನಿನ್ನ ಧ್ಯಾನವನ್ನೆಲ್ಲಾ
ನನ್ನತ್ತ ಸೆಳೆದುಕೊಳ್ಳುತಿದ್ದೆ..!!

ಕನ್ನಡಿಯೊಳಗಿನ ಪ್ರತಿಬಿಂಬ ನೀನು

ಶೖಂಗಾರವನ್ನು ಮಾಡಿಕೊಳ್ಳುವಾಗ
ನಿನ್ನ ಕಣ್ಣೊಳಗೆ ಕಣ್ಣಿಟ್ಟು ನೋಡುತಿದ್ದೆ
ನಿನ್ನ ಸೌಂದಯ೯ದ ಧ್ಯಾನದಲ್ಲಿ
ಲೀನವಾಗಿ, ಪ್ರೇಮಗೀತೆಯೊಂದು ಬರೆಯುತಿದ್ದೆ
ನಿನ್ನ ಹೆಸರಿನಲ್ಲೇ ಗುನುಗುನಿಸುತ್ತಾ ಹಾಡುತಿದ್ದೆ
ಗೆಳತಿ, ನೀ... ಹೋದೆಡೆಯಲೆಲ್ಲಾ ಇರುತಿದ್ದೆ...!!?

ನಿನ್ನ ಮುಖದ ಕಾಂತಿಯನ್ನು

ಕೈ ಬೀಸಿ ಕರೆದು, ಗಾಳಿಯಲ್ಲಿ ತೇಲಾಡುತ್ತ
ಸೌಂದಯ೯ವನ್ನು ಸಾರಿ ಹೇಳುವ ಕಿವಿಯೋಲೆಗಳು
ಓಲಾಡುವಾಗ, ಅದರ ಕೈ ಹಿಡಿದು ಜೀಕುತಿದ್ದೆ
ನಿನ್ನೊಂದಿಗೆಯೇ ಬಿಡದೇ ಜೀವಿಸುತಿದ್ದೆ
ಮಲಗಿದಾಗಲೂ ನೀ...
ನಿನ್ನ ತಲೆಯ ದಿಂಬಾಗಿ ಇರುತಿದ್ದೆ....!!

ಹೊಳಪಾದ ನಿನ್ನ ಕಣ್ಣುಗಳಿಂದ

ತೊಟ್ಟಿಕ್ಕುವ ಕಣ್ಣೀರು ಒರೆಸುತಿದ್ದೆ
ತಡೆಯುತಿದ್ದೆ, ಕೆಂಪಾದ ನಿನ್ನ ಕೆನ್ನೆಗುಂಟ
ಜಾರುವ ಬಿಸಿಯುಸಿರಿನ ಕಣ್ಣೀರು...
ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ....

ನಿನ್ನ ದುಖವನ್ನೆಲ್ಲಾ ನನ್ನದಾಗಿಸಿಕೊಂಡು

ಸಾಂತ್ವನಿಸುತಿದ್ದೆ, ಕೈ ಹಿಡಿದು ನಿನ್ನನ್ನು
ನನ್ನೆದೆಗಪ್ಪಿಕೊಳ್ಳುತಿದ್ದೆ ಪ್ರಿಯೆ.....

ಆರದ, ಮರೆಯದ ಗಾಯ ಹುಣ್ಣಾಗದಂತೆ

ಒಲವೆಂಬ ಮುಲಾಮನ್ನು ಹಚ್ಚುತಿದ್ದೆ
ನೀ ನಡೆವ ಹಾದಿಯಲ್ಲಿ..!!!!!!!!!!!
ಮುಳ್ಳುಗಳೇಷ್ಟೇ ಇದ್ದರೂ
ಕಿತ್ತೆಸೆದು ಬಿಡುತಿದ್ದೆ, ನಿನ್ನ ಬಾಳ ಪಯಣದಲ್ಲಿ
ಹೂ-ಹಾಸಿಗೆ ಚೆಲ್ಲುತಿದ್ದೆ....

ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ

ಹೂ-ನಗೆಯಾಗುವ ನಿನ್ನ ಮುಖಕೆಲ್ಲಾ ಮುತ್ತಾಗುತಿದ್ದೆ
ಹೊಂಗನಸಿನ ರಾತ್ರಿಗೆ ನವಿಲಾಗುತಿದ್ದೆ
ಕೋಗಿಲೆಯ ಕಂಠಕ್ಕೆ ಕವಿಯಾಗುತಿದ್ದೆ
ಕಲ್ಪನೆಯ ಚೆಲುವೆಗೆ ಚಿತ್ರಕಾರನಾಗುತಿದ್ದೆ
ಕೈ ಹಿಡಿವ ಜೊತೆಗಾರನಾಗಿ ಇರುತಿದ್ದೆ ಗೆಳತಿ
ನಿನ್ನ ಮುಗ್ಧ ಮನಸ್ಸಿನ ಸೌಂದಯ೯ದ
ಆರಾದಕನಾಗಿರುತಿದ್ದೆ.... ಅಭಿಮಾನಿಯಾಗಿರುತಿದ್ದೆ..|

-ರಚನೆಃ ವಿ.ಎಚ್. ವೀರಣ್ಣ ಮಂಠಾಳಕರ್




ನಾನಾಗಿದ್ದರೆ ನೀ ತೊಡುವ....
--------------------------

ನೀ ತೊಡುವ ಬಳೆಗಳ ಕೈ
ನಾನಾಗಿದ್ದರೆ ಗೆಳತಿ
ನಾಜೂಕಾದ ಬಳೆಗಳು
ಚೂರಾಗದಂತೆ ಉಡುಗೋರೆಯಾಗಿ
ಕೊಟ್ಟು ಸಂಭ್ರಮಿಸುತಿದ್ದೆ
ನಯವಾದ ಕೈಗಳಾಗಿ ಶೋಭಿಸುತಿದ್ದೆ
ನಿನ್ನ ಮುಖದಲ್ಲಿ ಮಂದಹಾಸ ನಗುವನ್ನು ತರುತಿದ್ದೆ...!

ನುಣುಪಾದ ನಿನ್ನ ಕೆನ್ನೆ
ಅದೇ ಕೈಗಳಿಂದ ಸವರುತಿದ್ದೆ
ಆ ಬಳೆಗಳ ನಾದದಲ್ಲಿ
ನಿನ್ನ ಧ್ಯಾನವನ್ನೆಲ್ಲಾ
ನನ್ನತ್ತ ಸೆಳೆದುಕೊಳ್ಳುತಿದ್ದೆ..!!

ಕನ್ನಡಿಯೊಳಗಿನ ಪ್ರತಿಬಿಂಬ ನೀನು
ಶೖಂಗಾರವನ್ನು ಮಾಡಿಕೊಳ್ಳುವಾಗ
ನಿನ್ನ ಕಣ್ಣೊಳಗೆ ಕಣ್ಣಿಟ್ಟು ನೋಡುತಿದ್ದೆ
ನಿನ್ನ ಸೌಂದಯ೯ದ ಧ್ಯಾನದಲ್ಲಿ
ಲೀನವಾಗಿ, ಪ್ರೇಮಗೀತೆಯೊಂದು ಬರೆಯುತಿದ್ದೆ
ನಿನ್ನ ಹೆಸರಿನಲ್ಲೇ ಗುನುಗುನಿಸುತ್ತಾ ಹಾಡುತಿದ್ದೆ
ಗೆಳತಿ, ನೀ... ಹೋದೆಡೆಯಲೆಲ್ಲಾ ಇರುತಿದ್ದೆ...!!?

ನಿನ್ನ ಮುಖದ ಕಾಂತಿಯನ್ನು
ಕೈ ಬೀಸಿ ಕರೆದು, ಗಾಳಿಯಲ್ಲಿ ತೇಲಾಡುತ್ತ
ಸೌಂದಯ೯ವನ್ನು ಸಾರಿ ಹೇಳುವ ಕಿವಿಯೋಲೆಗಳು
ಓಲಾಡುವಾಗ, ಅದರ ಕೈ ಹಿಡಿದು ಜೀಕುತಿದ್ದೆ
ನಿನ್ನೊಂದಿಗೆಯೇ ಬಿಡದೇ ಜೀವಿಸುತಿದ್ದೆ
ಮಲಗಿದಾಗಲೂ ನೀ...
ನಿನ್ನ ತಲೆಯ ದಿಂಬಾಗಿ ಇರುತಿದ್ದೆ....!!

ಹೊಳಪಾದ ನಿನ್ನ ಕಣ್ಣುಗಳಿಂದ
ತೊಟ್ಟಿಕ್ಕುವ ಕಣ್ಣೀರು ಒರೆಸುತಿದ್ದೆ
ತಡೆಯುತಿದ್ದೆ, ಕೆಂಪಾದ ನಿನ್ನ ಕೆನ್ನೆಗುಂಟ
ಜಾರುವ ಬಿಸಿಯುಸಿರಿನ ಕಣ್ಣೀರು...
ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ....

ನಿನ್ನ ದುಖವನ್ನೆಲ್ಲಾ ನನ್ನದಾಗಿಸಿಕೊಂಡು
ಸಾಂತ್ವನಿಸುತಿದ್ದೆ, ಕೈ ಹಿಡಿದು ನಿನ್ನನ್ನು
ನನ್ನೆದೆಗಪ್ಪಿಕೊಳ್ಳುತಿದ್ದೆ ಪ್ರಿಯೆ.....

ಆರದ, ಮರೆಯದ ಗಾಯ ಹುಣ್ಣಾಗದಂತೆ
ಒಲವೆಂಬ ಮುಲಾಮನ್ನು ಹಚ್ಚುತಿದ್ದೆ
ನೀ ನಡೆವ ಹಾದಿಯಲ್ಲಿ..!!!!!!!!!!!
ಮುಳ್ಳುಗಳೇಷ್ಟೇ ಇದ್ದರೂ
ಕಿತ್ತೆಸೆದು ಬಿಡುತಿದ್ದೆ, ನಿನ್ನ ಬಾಳ ಪಯಣದಲ್ಲಿ
ಹೂ-ಹಾಸಿಗೆ ಚೆಲ್ಲುತಿದ್ದೆ....

ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ
ಹೂ-ನಗೆಯಾಗುವ ನಿನ್ನ ಮುಖಕೆಲ್ಲಾ ಮುತ್ತಾಗುತಿದ್ದೆ
ಹೊಂಗನಸಿನ ರಾತ್ರಿಗೆ ನವಿಲಾಗುತಿದ್ದೆ
ಕೋಗಿಲೆಯ ಕಂಠಕ್ಕೆ ಕವಿಯಾಗುತಿದ್ದೆ
ಕಲ್ಪನೆಯ ಚೆಲುವೆಗೆ ಚಿತ್ರಕಾರನಾಗುತಿದ್ದೆ
ಕೈ ಹಿಡಿವ ಜೊತೆಗಾರನಾಗಿ ಇರುತಿದ್ದೆ ಗೆಳತಿ
ನಿನ್ನ ಮುಗ್ಧ ಮನಸ್ಸಿನ ಸೌಂದಯ೯ದ
ಆರಾದಕನಾಗಿರುತಿದ್ದೆ.... ಅಭಿಮಾನಿಯಾಗಿರುತಿದ್ದೆ..|


- ರಚನೆಃ ವೀರಣ್ಣ ಮಂಠಾಳಕರ್

ಸೋಮವಾರ, ಫೆಬ್ರವರಿ 6, 2012

ಪುಸ್ತಕ ವಿಮಶೆ೯


ಕಳೆದ ಸೆಪ್ಟೆಂಬರ್ 2011 ನೇ ಸಾಲಿನ ಮಾನಸ ಸಂಚಿಕೆಯಲ್ಲಿ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಪುಸ್ತಕ ವಿಮಶೆ೯ ಮಾಡಿರುವ ಕುರಿತು. ಸ್ಕ್ಯಾನ್ ಫೋಟೊ. ಮಾನಸ ಸಂಪಾದಕರಾದ ಗಣೇಶ ಕೊಡೂರ್ ಅವರಿಗೆ ಧನ್ಯವಾದಗಳು.


ಗುರುವಾರ, ಡಿಸೆಂಬರ್ 1, 2011

ವಾಸ್ತವಿಕ ಸ್ಥಿತಿಗತಿಯನ್ನು ಕಂಡು ಪ್ರತಿಭಟಿಸುವ ಕವನ

ಸಮ್ಮೇಳನ ಒಂದರಲ್ಲಿ ಕವನ ವಾಚನ ಮಾಡುತಿರುವುದು





ಮುಖವಾಡಗಳ ಸಂಗದಲ್ಲಿ
-------------------------


ತೋರಿಕೆಗೆ ಮಾತ್ರ ತೋರಣ ಕಟ್ಟುವ
ಸಮಾರಂಭಗಳು ಯಾರಿಗೆ ಬೇಕು
ನಿಮ್ಮ ಮೇಜು ಕುಚಿ೯ಗಳು
ಹಸಿದವರ ಹೊಟ್ಟೆಗೆ ಅನ್ನ ನೀಡದಿರುವಾಗ
ದಣಿದು ಬಂದವರಿಗೆ ದಣಿವಾರಿಸಿಕೊಳ್ಳಲು
ಆಗದಿರುವಾಗ....

ನೈಜ ಪ್ರತಿಭೆಗಳ ಕೊಲೆಗಳು ನಡೆಯುತಿವೆ
ಆಗಂತುಕರ ಮನಸಿನ ಮೇಳಗಳಲ್ಲಿ
ಮುಖವಾಡ ತೊಟ್ಟವರ ಮುಖಗಳೇ ಇಲ್ಲಿ
ಕಾಣುತಿರುವಾಗ, ಇದಕ್ಕೆ ಕಾರಣಗಳೆಲ್ಲಿ...

ನಿತ್ಯವೂ ನಡೆಯುವ ಕೊಲೆಗಳಿಗಂಜದೇ
ದುಷ್ಟರ ಸಂಹಾರಕ್ಕೆ ಗಟ್ಟಿ ಮನಸ್ಸಿನ
ಸ್ಪಷ್ಟ ಬರಹಗಾರರ ಚಾಟಿಏಟು ಬೇಕಿಲ್ಲಿ
ಸದೖಢ ಸಮಾಜದ ನಿಮಾ೯ಣಕ್ಕಾಗಿ

ಜಾತಿಯೆಂಬ ವಿಷಬೀಜ ಬಿತ್ತಿ ಬದುಕುತಿವೆ
ಪವಿತ್ರ ಪದಗಳಿಗೆ ಕುಲಗೆಡಿಸಿ ಮೆರೆಯುತಿವೆ
ತೋರಿಕೆಯ ತೋರಣದಲ್ಲಿ, ಹರಕೆಯ ಕುರಿಯಾಗಿ
ಊರೆಲ್ಲ ಮೆರವಣಿಗೆ ಯಾರಿಗೆ ಬೇಕೋ...
ಅವರನ್ನೆಲ್ಲಾ ಕೈಬೀಸಿ ಕರೆಯುತಿವೆ
ಹಸುವಿನ ಮುಖವಾಡ ತೊಟ್ಟ ಜಾತಿ ನಿಮಾ೯ಪಕರು
ಮೂಲ ಪ್ರತಿಭೆಗಳ ನಿಗದಿತ ಕೊಲೆ ಮಾಡಲು ಎಲ್ಲೆಂದರಲ್ಲಿ
ಹಾಕುತಿದ್ದಾರೆ ಹೊಂಚು...
ಕೈ ಚಾಚಿ ಬೇಡುತಿರುವರು ಮಚ್ಚು

ಅದೇಷ್ಟೇ ಸಲವೂ ಕೊಂದು ಬಿಡಲಿ
ಸಾಯುವುದಿಲ್ಲ ನಾವು...ಸುಟ್ಟು ಬೂದಿಯಾದರೂ
ಮತ್ತೆ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಜೀವಿಸಬೇಕು
ಕೊಚ್ಚಿ ಕೊಲೆಗೈಯುವವರ ಸಂಗದಲ್ಲೇ
ಸಾಧನೆಯ ಪಥದಲ್ಲಿ ಸಾಗಬೇಕು.

-ವಿ.ಎಚ್.ವೀರಣ್ಣ ಮಂಠಾಳಕರ್


ಕಳೆದ ನವೆಂಬರ್ 21, 2011 ರಂದು ಬಸವಕಲ್ಯಾಣ ತಾಲೂಕಿನ ಕಸಾಪ ವತಿಯಿಂದ ನಡೆದ ನಾರಾಯಣಪೂರ ವಲಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾಚನ ಮಾಡಿದ ಕವಿತೆ.

ಬುಧವಾರ, ಜುಲೈ 13, 2011

ಮಂಠಾಳಕರ್ ಕವನ ವಾಚನ




ಇದೇ ಜುಲೈ 12, 2011 ರಂದು ಭಾಲ್ಕಿಯಲ್ಲಿ ನಡೆದ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೀರಣ್ಣ ಮಂಠಾಳಕರ್ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಂದಭ೯ದಲ್ಲಿ ಸಮ್ಮೇಳನಾಧ್ಯಕ್ಷರಾದ ಸುಬ್ಬಣ್ಣ ಅಂಬೆಸಿಂಗೆ ಅವರಿಂದ ಗೌರವ ಸನ್ಮಾನ ಸ್ವೀಕರಿಸಿದರು. ಇದೇ ಸಂದಭ೯ದಲ್ಲಿ ಮತ್ತೆ ಹುಟ್ಟಿ ಬರುವುದನ್ನೇ ಮರೆತಿದ್ದಾರೆ ಎಂಬ ಕವಿತೆಯನ್ನು ಓದುವ ಚಿತ್ರದಲ್ಲಿ ವೀರಣ್ಣ ಮಂಠಾಳಕರ್.

ಗುರುವಾರ, ಏಪ್ರಿಲ್ 21, 2011

ಮಂಠಾಳಕರ್ ಅವರ ಸುಳಿಗಳು ಸಂಕಲನದಿಂದ ಆಯ್ದ ಕೆಲವು ಚುಟುಕುಗಳು


ಮಂಠಾಳಕರ್ ಅವರ ಸುಳಿಗಳು ಸಂಕಲನದಿಂದ ಆಯ್ದ ಕೆಲವು ಚುಟುಕುಗಳು 

ಮಂಠಾಳಕರ್ ಅವರ (ಸುಳಿಗಳು) ಕವನ-ಹನಿಗವನಗಳಸಂಕಲನ         
ಮಾನ್ಯರೆ,

ವೀರಣ್ಣ ಮಂಠಾಳಕರ್ ಅವರು ಮೊದಮೊದಲು ಬೀದರ ಜಿಲ್ಲೆಗೆ ಹೆಸರಾಂತ ಚುಟುಕು ಸಾಹಿತಿಯೆಂದೇ ಹೆಸರಾಗಿದ್ದರು. ಇತ್ತೀಚೆಗಷ್ಚೆ ಕಥೆ, ಕವನ, ಲೇಖನಗಳು ಬರೆಯುವುದರ ಮುೂಲಕ ಬಹುಮುಖ ಪ್ರತಿಭೆಯಾಗಿದ್ದಾರೆ, ಕಾವ್ಯದಲ್ಲಿ ವಿಶೇಷವಾದ ಆಸಕ್ತಿ ಹೊಂದಿರುವ ಇವರು ಪ್ರಸ್ತುತ ಪತ್ರಕತ೯ರಾಗಿ ಬಸವಕಲ್ಯಾಣದಲ್ಲಿ ಸೇವೆ ಸಲ್ಲಿಸುತಿದ್ದಾರೆ. ಇವರ ಅನೇಕ ಬಿಡಿ ಬರಹಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದವರಾದ ಇವರು ವಿವಿಧ ಆಸಕ್ತಿಗಳನ್ನು ಹೊಂದಿದ್ದಾರೆ. ಅನೇಕ ಬಿಡಿ ಬರಹಗಳನ್ನು ರಚಿಸಿದ್ದಾರೆ. ಇವರು 2005 ರಲ್ಲಿ ತಮ್ಮದೇ ಪ್ರಕಾಶನದಡಿಯಲ್ಲಿ ಸಂಕಲ್ಪ ಎಂಬ ಸಾಹಿತ್ಯ ಪತ್ರಿಕೆಯೊಂದನ್ನು ಆರಂಭಿಸಿದರು. ಪತ್ರಿಕೆಯ ಉದ್ದೇಶ ಯುವ ಬರಹಗಾರರನ್ನು ಗುರುತಿಸುವುದು, ಅವರಿಗೆಂದೇ ಪ್ರತ್ಯೇಕವಾದ ವೇದಿಕೆ ಕಲ್ಪಿಸಿಕೊಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮವಾದ ಸೇವೆ ಸಲ್ಲಿಸಿದವರನ್ನು ಹಾಗು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರ ಕುರಿತು ಬರೆಯುವುದರಿಂದ ಹಿಡಿದು ಮುಂತಾದ ಯೋಜನೆಗಳನ್ನು ಹಾಕಿಕೊಂಡಿದ್ದರು. ಕನಸುಗಳನ್ನು ಕೈಗೂಡದೆ ಸಂಕಲ್ಪ ಮಾಸ ಪತ್ರಿಕೆ ಆಥಿ೯ಕ ಮುಗ್ಗಟ್ಟಿನಿಂದ ಅನಿವಾಯ೯ ಕಾರಣಕ್ಕೆ ನಿಲ್ಲಿಸಬೇಕಾಯಿತು. ಇಲ್ಲಿಗೆ ಮಂಠಾಳಕರ್ ಅವರ ಆಸಕ್ತಿ ಕುಂದಲಿಲ್ಲ. ಕನಸುಗಳು ಗಗನದೆತ್ತರಕ್ಕೆ ಹಾರಾಡುತ್ತಲೆ ಇದ್ದವು. ಆ ಕಾರಣದಿಂದ ಎಲ್ಲೇ ಇದ್ದರೂ ಅವರಲ್ಲಿ ಸಂಕಲ್ಪ ಎಂಬ ಪದ ಚಿಗುಗೊಡೆಯುತ್ತಲೇ ಇತ್ತು ಅದರ ಒಂದು ಪ್ರತೀಕ ಇದೀಗ ವೀರಣ್ಣ ಮಂಠಾಳಕರ್ ಅವರು ತಮ್ಮ ಸ್ವ-ಸಾಮಥ್ಯ೯ದಿಂದ ಕಂಪ್ಯೂಟರ್ ಲೋಕವನ್ನು ಪ್ರವೇಶಿಸಿದ್ದಾರೆ. ತಮಗನಿಸಿದ್ದನ್ನು, ತಮ್ಮ ವಿಚಾರಕ್ಕೆ ಬಂದಿದ್ದನ್ನು ವೀರ ಸಂಕಲ್ಪ ಮತ್ತು ಕವಿ-ಕಲಾವಿದರು ಬ್ಲಾಗನಲ್ಲಿ ಅನಾವರಣಗೊಳಿಸುವ ಉದ್ದೇಶದಿಂದ ಅವರ ಒಂದು ಮಹತ್ವವಾದ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿನಂದಿಸೋಣ. ಮಂಠಾಳಕರ್ ಅವರ ಸುಳಿಗಳು ಕವನ ಸಂಕಲನ 2006 ರಲ್ಲಿ ಪ್ರಕಟಗೊಂಡಿದ್ದು ಸಂಕಲನದಿಂದ ಕೆಲವು ಆಯ್ದ ಚುಟುಕುಗಳು ನಿಮಗಾಗಿ....ಕೊಟ್ಟಿದ್ದೇವೆ. ಹಂತ-ಹಂತವಾಗಿ ಜಿಲ್ಲೆ, ರಾಜ್ಯ-ರಾಷ್ಟ್ರ ಕವಿಗಳು, ಕಲಾವಿದರ ಕುರಿತು ಈ (ಕವಿ-ಕಲಾವಿದರು) ಬ್ಲಾಗನಲ್ಲಿ ಪರಿಚಯಿಸುವ ಮಹತ್ವದ ಯೋಜನೆ ಇವರಲ್ಲಿ ಗರಿಗೆದರಿದೆ. ಅದಕ್ಕಾಗಿ ನಾವೆಲ್ಲ ಬೆಂಬಲಿಸೋಣ. ಅವರ ಜೊತೆಯಾಗಿ ಇರೋಣ. ಏನಂತಿರಾ...? ಓದಿ ಅಬಿಪ್ರಾಯ ಬರೆಯಿರಿ...............
      
                                                                 ನಿಮ್ಮ
                                                            ಅಕ್ಷರ ಪ್ರೇಮಿ




















ಸೋಮವಾರ, ಏಪ್ರಿಲ್ 18, 2011

ಕವಿ-ಕಲಾವಿದರ ಸಂಕ್ಷಿಪ್ತ ಪರಿಚಯ




ವೀರಣ್ಣ ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದಿಂದ ಆಯ್ದ ಕವಿತೆಗಳು

     ವೀರಣ್ಣ ಮಂಠಾಳಕರ್
ಮಂಠಾಳಕರ್ ಅವರು ಹೆಸರಾಂತ ಕವಿಯಾಗಿ, ಬೀದರ ಜಿಲ್ಲೆಯ ಪ್ರತಿಭಾವಂತ ಲೇಖಕರಲ್ಲಿ ಪ್ರಮುಖವಾಗಿ ಎದ್ದು ಕಾಣುವ ಇವರ ಆಸಕ್ತಿಗಳು ವಿಬಿನ್ನವಾಗಿ ಕಂಡು ಬರುತ್ತದೆ. ಪತ್ರಕತ೯ರಾಗಿ, ಸಂಪಾದಕರಾಗಿ, ಅಂಕಣ ಬರಹಗಾರರಾಗಿ, ಸೇವೆ ಸಲ್ಲಿಸಿರುವ ಇವರು ಕನ್ನಡ ಚಲನಚಿತ್ರದಲ್ಲಿ ಗೀತ ರಚನೆ ಮಾಡುವ ಸಂಕಲ್ಪವನ್ನು ಕೂಡ ಹೊಂದಿದ್ದಾರೆ. ಈಗಾಗಲೆ ನಾಲ್ಕು ಸ್ವರಚಿತ ಕವನ ಸಂಕಲನ ಹಾಗು ಬದುಕಿನ ಬೆನ್ನೇರಿ ಎಂಬ ಕಥಾ ಸಂಕಲನ ಪ್ರಕಟಿಸಿದ್ದಾರೆ. ವೀರಣ್ಣ ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದ ವಿಮಶೆ೯ ಕನ್ನಡಪ್ರಭ ಪತ್ರಿಕೆಯಲ್ಲಿ ನವೆಂಬರ್14ರಂದು ಅಕ್ಷರ ತೋರಣದಲ್ಲಿ ವಿಮಶೆ೯ಗೊಳಪಟ್ಟಿದೆ. ಇದರಿಂದ ಇವರ ವ್ಯಕ್ತಿತ್ವಕ್ಕೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿದೆ. ಯಾರೂ ಇವರನ್ನು ಗುರುತಿಸದಿದ್ದರೂ ಸ್ವ-ಸಾಮಥ್ಯ೯ ವ್ಯಕ್ತಿತ್ವದ ಮಂಠಾಳಕರ್ ಚುಟುಕು  ಸಾಹಿತ್ಯದಿಂದ ವಿಶೇಷವಾದ ಗಮನ ಸೆಳೆಯುತ್ತಾರೆ. ಅನೇಕ ಕವಿತೆಗಳು, ಕಥೆಗಳು, ಲೇಖನಗಳನ್ನು ರಚಿಸಿರುವ ಇವರು ಕೊಂದವರು ಮತ್ತು ಹಸಿವು ಎಂಬ ಎರಡು ಕಾದಂಬರಿ ರಚನೆಯಲ್ಲಿ ಇದೀಗ ತಲ್ಲೀನರಾಗಿದ್ದಾರೆ. ಸೂಕ್ತವಾದ ವೇದಿಕೆ, ಪ್ರೋತ್ಸಾಹಗಳನ್ನು ದೊರೆತರೆ ಉನ್ನತಮಟ್ಟದ ಬರಹಗಾರರಾಗಿ ಇವರು ಬೀದರ ಜಿಲ್ಲೆಗೆ ಹೆಸರಾಂತ ಸಾಹಿತಿಗಳಾಗಿ ಮುಂದೊರೆಯಲಿದ್ದಾರೆ ಎಂಬ ವಿಶ್ವಾಸ ಮಂಠಾಳಕರ್ ಅವರ ಬರವಣಿಗೆಯಿಂದ ತಿಳಿದು ಬರುತ್ತದೆ. ಇವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದಿಂದ ಒಂದಿಷ್ಟು ಆಯ್ದ ಕವಿತೆಗಳು ನಿಮಗಾಗಿ ಇಲ್ಲಿ ಕೊಡಲಾಗಿದೆ. ಓದಿ ಅಭಿಪ್ರಾಯ ಬರೆಯುತ್ತಿರಲ್ಲ...?
                       ಭಾಗ್ಯಶ್ರೀ ಹಾರಕೂಡೆ,ಹುಲಸೂರು ಬಸವಕಲ್ಯಾಣ