ಸೋಮವಾರ, ಫೆಬ್ರವರಿ 27, 2012


ನಾನಾಗಿದ್ದರೆ ನೀ ತೊಡುವ....

--------------------------


1.)
ನಿನ್ನ ಮನದೊಳಗೆನೋ
ಒಂದು ಆಸೆ! ಪುಟಿಯುತ್ತಿದೆ
ಬರೆದು ಬಿಡಲೇ ಗೆಳತಿ
ನಿನ್ನ ದೖಷ್ಠಿಯಲ್ಲಿ ಬೆರೆತುಕೊಂಡಿರುವ
ಆ ಪ್ರೇಮ ಗೀತೆ, ಭಾಷೆ.?

ಮಾತಿಲ್ಲದ ಮೌನದಲ್ಲಿ

ನಿಂತ ನಿನ್ನ ಭಂಗಿ
ಮುಗ್ಧ ಚೆಲುವೆಯ ಸ್ನಿಗ್ಧ ನಗುವು
ಕಂಡು, ಚಿಗುರೆಲೆಗಳೊಂದಿಗೆ
ಮೈದುಂಬಿಕೊಂಡು ನಿಂತ
ಹೂ ಗಿಡವೂ ಕೂಡ ನಾಚಿಕೊಂಡಿದೆ!
ನಿನ್ನ ನೋಡಿ ತನ್ನ ಚೆಲುವನ್ನೆಲ್ಲಾ
ಮುಚ್ಚಿಕೊಂಡಿದೆ.

ನಿನ್ನ ಹಾಗೇ ಹೊಸ ಹುರುಪು

ಹೊಸ ಉತ್ಸಾಹ, ಉಲ್ಲಾಸ
ಹೊತ್ತು ತಂದಿದೆ...
ಹೂವಿಗಿಂತಲೂ ಚೆಲುವೆ ನೀನು
ಹೂ... ಯಾಕೆ ಬೇಕು ನಿನಗೆ
ಒಂದೂ ತಿಳಿಯದು...!

ಇಬ್ಬನಿಯು ಮೂಡುವಾಗ

ಮೌನ ಮುರಿದು ಬಾರೇ ಚೆಲುವೆ
ಅಂದಗಾತಿ ಹೆಣ್ಣೆ... ಚೆಂದವಾದ
ನಿನ್ನಾ ಕಣ್ಣ ಹೊಳಪಿನಾ ಕಣ್ಸನ್ನೇ.....
ನೀಡುವಾಗ ಸ್ನೇಹಕ್ಕೆ ಸೂಚನೆ
ನೀ ಬರುವ ಹಾದಿಯಲ್ಲಿ ಚೆಲ್ಲಿರುವೆ
ಹೂ ಹಾಸಿಗೆ.... ಹೂವಿನಂಥ ಮನಸ್ಸಿಗೆ||
-------


2.)


ಉಸಿರೇ ನೀ ಮೌನವಾಗಿರಬೇಡ

ನನ್ನ ಉಸಿರಾಟ ನಿಂತು ಹೋದಿತ್ತು
ನಿನ್ನ ಬಿಟ್ಟು ನನಗ್ಯಾರಿಲ್ಲ
ನೀನೇ ನನ್ನ ಜೀವ ಎಂದಿತು.

ನಿನ್ನ ಸ್ಪಶ೯, ಬಿಸಿ ಉಸಿರಾಟ

ದಿನವೂ ನೀನು ಬರೆದಂತೆಲ್ಲಾ
ನಿತ್ಯ ಸುಮಂಗಲಿಯ ಹಣೆಯ ಮೇಲೆ
ಶೋಭಿಸುವಂತೆ ಕುಂಕುಮ
ನನ್ನ ನಿನ್ನಾ ಈ ಬಂಧನ

ನಿನ್ನ ಕೈ ಹಿಡಿದು ನಡೆಸುವವನ

ಮನದ ಭಾವನೆಗಗಳು ಅದೇಷ್ಟು ಛಂದ
ಅದಕ್ಕಾಗಿಯೇ ನಮ್ಮಿಬ್ಬರಲ್ಲಿ ಈ ಬಂಧ||!

ನಮ್ಮಿಬ್ಬರನ್ನು ಯಾರೂ....

ಎಂದಿಗೂ ದೂರ ಮಾಡರು
ಒಂದು ವೇಳೆ ದೂರ ಮಾಡಲು
ಹೊರಟವರ ಬಾಳಿನಲ್ಲಿ
ಇರುವುದಿಲ್ಲ ಆಸೆ ಕನಸುಗಳ ಸೂರು.

3.)

ಕಣ್ಣಿನಿಂದ ನೋಡದೇ
ಹೖದಯದಲ್ಲಿ
ಸೇರಿಕೊಳ್ಳುವ ನೆನಪುಗಳು
ಪ್ರೀತಿಯೇನು ಗೆಳತಿ

ಅಂತರಂಗವೆಂಬ ನೋಟದಲ್ಲಿ

ಕಾಣುವ ವೈಭವ
ಸ್ಪಶ೯ದ ಅನುಭವ
ಪ್ರೀತಿಯೇನು ಗೆಳತಿ

ಹೇಳು ಪ್ರೀತಿಯೆಂದರೇನು

ಮೊಬೈಲ್ ನಿಂದ ಮೊಬೈಲ್ ಗೆ
ಬರುವ ಮಿಸ್ಡ್ ಕಾಲ್! ಒಂದು ಪುಟ್ಟ ಸಂದೇಶ
ಗೊತ್ತು ಪರಿಚಯವಿಲ್ಲದವರು
ಕಳುಹಿಸಿದಾಗ ಪ್ರೀತಿಯೇನು ಗೆಳತಿ..?

ನೂರು ಭಾವ ಪ್ರತಿಬಿಂಬಿಸುವ

ಒಂದು ಸಾಲಿನ ಪುಟ್ಟ ಸಂದೇಶ
ಸೖಷ್ಟಿಸುವ ಅವಾಂತರ
ಪ್ರೀತಿಯೇನು ಗೆಳತಿ....?
ಹೇಳು ಪ್ರೀತಿಯೆಂದರೇನು
------
ಈ.. ಕವಿತೆ 2006 ರಲ್ಲಿ ಪ್ರಕಟವಾದ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದಿಂದ ಆಯ್ದದ್ದು. ಕನ್ನಡಪ್ರಭ ದ ನವೆಂಬರ್ 2010 ರಲ್ಲಿ ಅಕ್ಷರ ತೋರಣದಲ್ಲಿ ಮತ್ತು ಇತ್ತೀಚಿಗೆ ಮಾನಸ ಪತ್ರಿಕೆಯಲ್ಲಿ ಸೆಪ್ಟೆಂಬರ್ 2011 ರಲ್ಲಿ ವಿಮಶೆ೯ಗೊಳಪಟ್ಟಿದೆ.



ಶುಭ ಮುಂಜಾನೆಯ

ಸವಿ ಸವಿ ನೆನಪುಗಳ
ಸಂದೇಶವಿದೋ...
ಮಧು ತುಂಬಿದ
ಶ್ರೀಯವರಿಗೆ... ಶುಭವಾಗಲಿ.


ಮನಸ್ಸೊಂದು ಕನ್ನಡಿ

ಬಂದು ಹೋಗುವವರನ್ನೆಲ್ಲಾ
ಸೆರೆ ಹಿಡಿದು...
ಬಿಟ್ಟುಬಿಡುವ ಪೊಲೀಸ್
ಕಸ್ಟಡಿಯಲ್ಲ.....
ಚಿರ ಶಾಶ್ವತವಾಗಿರುತ್ತವೆ.

ಸುಂದರ ನೆನಪುಗಳು

ಮನಸ್ಸಿನ ಹಂದರದಲ್ಲಿ
ಬೇರೂರಿ ಬಿಟ್ಟಾಗ...
ಇತರರನ್ನು ನಾವು
ನೋಡಿದಾಗ ಅವರು ನಮಗೆ
ನೋಡಿದಾಗಲೂ, ಎಲ್ಲರೂ
ಸುಂದರವಾಗಿಯೇ ಕಾಣುತ್ತೇವೆ
ವಿಷಾದವೆಂದರೆ...?
ನಮ್ಮ ಒಳ ವೇದನೆಗಳನ್ನು
ಅರಿಯದೇ ಮರೆಯುತ್ತೇವೆ.
ಅಷ್ಟೇ.



ನಿನ್ನ ನೆನಪುಗಳೆಂದರೆ

ನನ್ನೀ ಎದೆಯ ಗೂಡಿನಲ್ಲಿ
ಚಿಲಿಪಿಲಿ ಗುಟ್ಟುವ ಹಕ್ಕಿಗಳ ಹಸಿವು

ನಿನ್ನ ನೆನಪುಗಳೆಂದರೆ ಗೆಳತಿ

ಕಾಣದ ದೇವರನ್ನು ಧ್ಯಾನಿಸುತ್ತ
ಧ್ಯಾನದಲ್ಲಿ ಲೀನವಾಗಿ ವರವೊಂದು
ಪಡೆದ ಖುಷಿ ಸಂಭ್ರಮ

ನಿನ್ನ ನೆನಪುಹಳೆಂದರೆ

ಕಣ್ಗಳ ಬಿಂಬದಲ್ಲಿ
ಕಾಣುವ ಕನಸಿನ ಪಯಣ

ನಿನ್ನ ನೆನಪುಗಳೆಂದರೆ ಗೆಳತಿ

ಕವಿಯ ಭಾವ ತರಂಗದಲ್ಲಿ
ತೇಲಾಡುವ ಮನಸಿನಂತರಂಗದ
ವಿಚಿತ್ರ ಕಲ್ಪನೆಗಳು

ನಿನ್ನ ನೆನಪುಗಳೆಂದರೆ

ಮುಂಜಾನೆಯೆದ್ದು ನಸುನಕ್ಕು
ನಾಚುತ್ತ, ಅಂಗಳದಲ್ಲಿ ಬಂದು
ರಂಗೋಲಿ ಬಿಡಿಸಿ
ಹೋದ ಹುಡುಗಿ

ನಿನ್ನ ನೆನಪುಗಳೆಂದರೆ ಗೆಳತಿ

ಈ ಕವಿತೆಯ ಜೀವ ಭಾವದಲ್ಲಿ
ಒಂದಾಗಿ, ನಿನಗಾಗಿರುವ
ನನ್ನುಸಿರಿನ ಧ್ವನಿ

ನಿನ್ನ ನೆನಪುಗಳೆಂದರೆ

ದಡಮುಟ್ಟಿ ಹಿಂತಿರುಗಿ
ಹೋಗುವ ಅಲೆಗಳಂತೆ
ನಿನ್ನಾ ನೆನಪುಗಳು.... ಗೆಳತಿ
------------



ದೂರವಿರು ಹತ್ತಿರ ಸುಳಿಯಬೇಡ

------------------------------

ದೂರವಿರು ಹತ್ತಿರ ಸುಳಿಯಬೇಡ

ಮನಸ್ಸಿನ ಭಾವನೆಗೆ ಸುಳಿಯಾಗಬೇಡ
ಮರೆತು ಮಾತು ತೆರೆದ ಪುಯ ಆಗಬೇಡ
ನಿನ್ನ ಬರವಸೆಗಳಿಗೆ ನೊಂದಿರುವೆ
ಆರದ ಗಾಯದ ಮೇಲೆ ಬರೆಯಾಗಬೇಡ

ದೂರವಿರು ಹತ್ತಿರ ಸುಳಿಯಬೇಡ

ಕನಸಿನ ಕಣ್ಣಿನ ಸ್ವಪ್ನ ಸುಂದರಿಯಾಗಬೇಡ
ವಿಷ ಸಪ೯ ನೀನು, ಗಾಳಿಯಂತೆ ಸುಳಿಯಬೇಡ
ತಂಗಾಳಿ ಬೀಸಿ ಜ್ವಾಲಾಮುಖಿಯಂತೆ...?
ಮನಸ್ಸಿನನಾಳಕ್ಕಿಳಿದು ಬೆಂಕಿ ಹಚ್ಚಬೇಡ

ದೂರವಿರು ಹತ್ತಿರ ಸುಳಿಯಬೇಡ

ನೀ ನನ್ನ ಬಾಳಿನ ಬತ್ತಿಯ ಹಣತೆಬಾಗಬೇಡ
ನಿನ್ನಾ ಹಣತೆಯೊಳಗೆ ನನ್ನ ರಕ್ತ ಸುರಿದು
ನನ್ನನ್ನೇ ಬತ್ತಿಯಾಗಿ ಹೊಸೆದು
ಬೆಳಕು ಕಾಣಬೇಡ.....
ಬೆಳಕಿನಡಿಯ ಕತ್ತಲು ನೀನೆಂಬುದು
ಮರೆಯಬೇಡ...!

ದೂರವಿರು ಹತ್ತಿರ ಸುಳಿಯಬೇಡ

ನಾ ಸತ್ತರೂ ಸ್ಮಶಾನಕೊಯ್ಯಬೇಡ
ನನ್ನ ಶವದ ಸುತ್ತ ಕಣ್ಣೀರು ಸುರಿಸಬೇಡ
ಮತ್ತೆ ಶವದ ಬತ್ತಿ ಹೊಸೆದು ಹಣತೆಯಾಗಬೇಡ
ನನ್ನ ಸುಟ್ಟ ರಕ್ತವೇ ಸುರಿದು
ದೀಪ ಹಚ್ಚಬೇಡ...

- ಈ ಕವಿತೆ ಕಮ೯ವೀರ ವಾರ ಪತ್ರಿಕೆಯಲ್ಲಿ ದಿನಾಂಕ, 26 ಜುಲೈ 2007 ರಲ್ಲಿ ಪ್ರಕಟಗೊಂಡಿರುತ್ತದೆ. ಇದೇ ಕವನ ನನ್ನ ಗಾಂಧಿ ಆಗ್ಬೇಕಂದುಕೊಂಡಾಗ ಸಂಕಲನದಲ್ಲಿ ಸೇರಿದ್ದು ಕೂಡ.




ಸಾವು.............

--------------
ದಿನವೂ ಸತ್ತು ಬದುಕುತ್ತೇವೆ
ಏತಕ್ಕೆ....?
ಒಮ್ಮೆ ಹುಟ್ಟಿದ ಬಳಿಕ
ಸಾವೆಂಬುದು ಖಚಿತವಲ್ಲವೇ
ಈ ದೇಹಕ್ಕೆ

ಮತ್ಯಾಕೆ ಈ ಉಸಿರಾಟ

ಬದುಕು, ಮಲಗಿದಾಗ
ಭುಸುಗುಡುವ ಸಾವು...!?

ಮೈಚಾಚಿ ಉದ್ದಕ್ಕೆ

ವಿವಿಧ ಭಂಗಿಗಳಲ್ಲಿ ನಾವು
ದಿನವಿಡೀ ದುಡಿದು
ದಣಿದ ದೇಹಕ್ಕೆ
ವಿಶ್ರಾಂತಿಯ ನೆಪವೊಡ್ಡಿ

ಜೋಗುಳವನ್ನು ಹಾಡಿ

ಮಲಗಿಸುವ ಆ ಸಾವಿಗೆ
ಮೆಚ್ಚಲೇಬೇಕು....
ಅದರ ಬುದ್ಧಿಗೆ

ಇರಬಹುದು ನಮಗೆಲ್ಲ

ಸಾವಿನ ಆಹ್ವಾನಕ್ಕೆ
ಎಚ್ಚರಿಕೆಯ ಕರೆಯೋಲೆ
ಇಣುಕಿ...ಇಣುಕಿ ನೋಡುವ
ಬೆಳಕು ಕತ್ತಲಿನ ನಡುವೆ
ಬಚ್ಚಿಟ್ಟುಕೊಂಡ ಹೇ ಸಾವೇ...!!!!!!!!!


ಕಮ೯ವೀರ ವಾರ ಪತ್ರಿಕೆಯಲ್ಲಿ ದಿನಾಂಕಃ 29 ಜುಲೈ 2007 ರಂದು ಹಾಗೂ ಸಂಯುಕ್ತ ಕನಾ೯ಟಕ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ. ಇದೇ ಕವನ ನನ್ನ ಕವನ ಸಂಕಲನದಲ್ಲಿ ಕೂಡ.


ನಾನು ಮತ್ತು ಸಾವು

------------------

ಒದಗಿ ಬಂದಾಗ ಈ ದೇಹಕ್ಕೆ

ಉಸಿರಾಟ ನಿಂತು ಹೋದಾಗ
ಸಾವಿನ ಸನಿಹಕ್ಕೆ ಬಂದು
ಕುಳಿತು ಮಾತಾಡುವ ಬಯಕೆ

ಹೆದರಬೇಡ ಸಾವೇ

ನಿನ್ನ ಕುರಿತು
ಬರೆಯುತ್ತೇನೆಂದು
ಒಂದು ಕವಿತೆ
ಕೇಳು ಬಾ ಇಲ್ಲೊಂದಿಷ್ಟು
ನನ್ನ ಜೀವನದ ಕಥೆ-ವ್ಯಥೆ

ಯಾರು ನೀನು...?

ಅದೇಕೆ ಅಷ್ಟೊಂದು ಅಗೋಚರ
ವಿಸ್ಮಯ! ಭಯಂಕರ ನೀನು

ಬಾ ಕುಳಿತುಕೋ

ಮಾತು, ಕತೆ, ಚಚೆ೯, ಸಂವಾದ
ನಡೆಯಲಿ ನಮ್ಮಿಬ್ಬರ ನಡುವೆ
ಒಂದಿಷ್ಟು ಕಾಫಿ, ಚಹಾದ ಸ್ವಾದ
ಸವಿಯೋಣ, ಬಂದಂಥ ನೆಂಟರಿಷ್ಟರ
ನಡುವೆ ನಾವಿಬ್ಬರೇ...

ಬಂಧು ಬಾಂಧವ್ಯದ ನಡುವೆ

ಏನೋ ವಾದ ವಿವಾದ ನಡೆಯುತ್ತಿದೆ
ನಾನೇನು ಮಹಾ ಕವಿಯಲ್ಲ
ಸಾಮಾನ್ಯ ಒಬ್ಬ ಮನುಜ
ಹುಟ್ಟುವಾಗಲೇ ನಿನ್ನೊಂದಿಗೆ
ಗೆಳೆತನ ಬೆಳದದ್ದು ಸಹಜಃ ನಮ್ಮಿಬ್ಬರದ್ದು
ಮುರಿಯದ ಬಂಧನವೆಂಬುದು ಕೂಡ ನಿಜ

ನನ್ನ ಕವಿತೆಗಳಿಗೆ ಮೂಲ ಪ್ರೇರಣೆಯೆಂದರೆ

ಆಸೆ, ನಿರಾಸೆ, ಭಗ್ನ ಪ್ರೀತಿ
ನಂತರ ವಸ್ತುಗಳನ್ನಾಗಿಸಿಕೊಂಡಿದ್ದು..?!
ಮುರಿದು ಬಿದ್ದ ಕನಸು, ಬಡತನ
ಶಾಶ್ವತ ನಮ್ಮಿಬ್ಬರದೇ ಗೆಳೆತನ.

-----------


ಸಾವಿಲ್ಲದ ಮನೆ ಯಾರೂ ಕಟ್ಟಿಕೊಳ್ಳುವುದಿಲ್ಲ

------------------------------------------

ನಾನು ಇಲ್ಲಿಗ್ಯಾಕೆ ಬಂದೆ

ಎಲ್ಲೆವನು ಅನಾಥವಾಗಿ ಬಿಟ್ಟು
ಹೋಗಿರುವ ತಂದೆ

ಈ ಭೂಮಿ, ಪ್ರಕೖತಿ, ಪರಿಸರ

ಇಲ್ಲಿರುವ ಜನ ಎಷ್ಟೊಂದು ಅವಸರ
ಇರಬಹುದು ಇಲ್ಲವೂ ಮುಖವಾಡಗಳ ಚಿತ್ರ

ಬರುವಾಗ ಹೆತ್ತವವ್ವಳಿಗೆ

ನೋವು ಕೊಟ್ಟು ಬಂದೆ
ಇದಕ್ಕೆಲ್ಲ ಕಾರಣ ಆ ನನ್ನ ತಂದೆ
ಹುಟ್ಟಿಸಿದವನು ಇಲ್ಲಿ ಶಾಶ್ವತವಾಗಿ ಉಳಿಯಲಿಲ್ಲ
ಹುಟ್ಟಿರುವ ನನಗೂ ಬದುಕಲು ಬಿಡಲಿಲ್ಲ
ಬಾಳೊಂದು ಕಡಲಲ್ಲಃ ಬರಿದಾದ ಭೂಮಿಯಂತೆ ನಾವೆಲ್ಲ

ಈ ದೇಹದೊಳಗೆ ಉಸಿರಾಟ ಇರೋತನಕ

ಜೀವನ
ಎಲ್ಲವೂ ಮುಗಿದ ಬಳಿಕ ಬರೀ ಮೌನ
ಮನುಷ್ಯನ ಕೊನೆಯ ಆಸೆಯೆಂಬುದೇ ಆ ಸ್ಮಶಾನ!

ಈ ಭೂಮಿಯಿಂದ ನಾನು ಅಗಲಿದ ಬಳಿಕ

ಮಾಡಿಕೊಳ್ಳುತ್ತಾರೆ ಇದ್ದವರು ಶುಚಿಯಾದ ಝಳಕ
ಕಳೆದು ಹೋಯಿತೇ..?
ಅವರ ಮೈಮೇಲಿನ ಮೈಲಿಗೆ ಮತ್ತು ಸೂತಕ

ಅಗಲಿ ಹೋದವರು ಮತ್ತೆ ಮರಳಿ ಬರಲಿಲ್ಲ

ಇಲ್ಲಿದ್ದವರು ಯಾರೂ ಅಮರವಾಗಿ ಉಳಿಯಲಿಲ್ಲ
ಸಾವಿಲ್ಲದ ಮನೆ ಯಾರೊಬ್ಬರೂ ಕಟ್ಟಿಕೊಳ್ಳುವುದಿಲ್ಲ.

-ಗಾಂಧಿ ಆಗ್ಬೇಕಂದುಕೊಂಡಾಗ ನನ್ನ ಕವನ ಸಂಕಲನದಲ್ಲಿ ಸೇರಿಕೊಂಡ ಅಪರೂಪದ ಸಾವಿನ ಕುರಿತಾದ ಕೆಲವು ಕವಿತೆಗಳು ನಿಮಗೆ ಹೇಗನ್ನಿಸಿದವು ಎಂಬುದಕ್ಕೆ ಒಂದೆರಡು ಸಾಲು ಬರೆಯಲು ಮರೆಯಬೇಡಿ. ಅದೇ ನಿಮ್ಮ ಪ್ರೋತ್ಸಾಹವೇ ಕವಿಗೆ ಸ್ಫೂತಿ೯.


-------


ಸಾವಿನೊಂದಿಗೆ ಸರಸ

----------------------

ಸಾವೇ ಬರುವುದಾದರೆ ಬಾ

ನಿನ್ನ ಭಯವಿಲ್ಲ ನನಗೆ
ಬಣ್ಣ, ಬಣ್ಣದ ಚೆಂದ-ಗಂಧದ
ಹೂವಿನಲಂಕಾರವ ಮಾಡಿ ಮಲಗಿಸುವೆ
ಚಿರ ನಿದ್ರೆಗಾಗಿ ಜೋಗುಳವನ್ನು ಹಾಡಿಸುವೆ

ಘಮ-ಘಮಿಸುವ ಹೂ-ದಳಗಳು

ಎದ್ದು, ಕೇಕೆ ನಗುತ್ತಿರಬೇಕು....
ಹಾಗೇ ಸುತ್ತಲೂ ಕುಳಿತವರ ಕಂಡು
ಹೂವಿನ ಹಾರಗಳು ಕೇಕೆ ಹಾಕುತ್ತಿರಬೇಕು
ನಿನ್ನತ್ತ ಎಲ್ಲರೂ ಕೈ ಮಾಡಿ ತೋರಿಸುತ್ತಿರಬೇಕು..!

ಸಾವೇ ಬರುವುದಾದರೆ ಬಾ..

ನನ್ನ ಬಂಧು ಬಳಗಕ್ಕೆಲ್ಲ ಸಂತೈಸುವ ಶಕ್ತಿ
ನಿನ್ನಲ್ಲಿದ್ದರೆ....
ಒಮ್ಮೆ ಅವರ ಮನಸ್ಸಿನ ನೋವುಗಳನ್ನೆಲ್ಲಾ
ಹಗುರಗೊಳಿಸುವುದಾದರೆ
ಬದುಕುವ ಭರವಸೆಯಲ್ಲಿ ಸಾಂತ್ವನ
ತುಂಬಬಹುದಾದರೆ...


ಸಾವೇ...

ಬರುವುದಾದರೆ ಬಾ
ನೀ ಬಂದು ಹೋಗುವ ನಡುವೆ
ಎಷ್ಟೊಂದು ರಗಳೆ, ಕಂಗೆಟ್ಟ ಕಳೆ.?
ನಿನ್ನನ್ನು ಕುರಿತು ರೋಧಿಸುವವರ ಮೌನ ಕವಿದ ಮುಖದಲ್ಲಿ...
ನಗು, ಉಲ್ಲಾಸ ತಂದು ಕೊಡುವುದಾದರೆ.!
ಬರುವುದಾದರೆ ಬಾ....


ಈ ಎಲ್ಲಾ ಕವಿತೆಗಳು ನನ್ನ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲದಲ್ಲಿ ಸೇಪ೯ಡೆಗೊಂಡಿರುತ್ತವೆ. ಈ ಕವನ ಸಂಕಲನ ರಾಜ್ಯ ಮಟ್ಟದ ಪತ್ರಿಕೆ ಕನ್ನಡಪ್ರಭ ದಲ್ಲಿ ಕೂಡ ವಿಮಶೆ೯ಗೊಳಪಡಿಸಿದೆ.



ಆ ಚಂದ್ರನ ಬೆಳಕನ್ನು ಕಂಡು

ಒಣಗಿದ ಮರವೊಂದು ಹೇಳಿತ್ತು
ಬರದ ನಾಡಿನಲ್ಲಿ ಪ್ರೇಮಿಗಳಿಗೆ ನೆರಳಿಲ್ಲ
ಅವರ ಕುಶಲೋಪರಿಗೆ ಕವಿಯಾಗುವ
ಪರಿಸರವೂ ಸಧ್ಯಕ್ಕಿಲ್ಲ..
ಬೆಳಕ್ಕಾಗಿ ನೀ ಬಂದರೂ ನೆರಳಾಗಿ
ಇರಲು, ನನ್ನಲಿಲ್ಲ ಹಸಿರೆಲೆಗಳ ಸಂಪತ್ತು.
ಹರಿಯುವ ಸಾಗರವು ಹೇಳಿತ್ತು
ಪ್ರೇಮಿಗಳು ನನ್ನ ಎದೆಯ ಅಂಗಳದಲ್ಲಿ
ಈಜಾಡಬಹುದೆಂದು.....
ಪ್ರೇಮವೆಂಬ ಲೋಕದಲ್ಲಿ ಈಜಾಡಲು ಬಾರದವರು
ಮುಳುಗಬಹುದು ಕೂಡ ಎಂದು ಹೇಳಿತ್ತು.
-----------------

ನನ್ನ ಮನಸ್ಸನ್ನು ಕದ್ದವಳು
ಎಲ್ಲಿರುವಳೋ ಗೊತ್ತಿಲ್ಲ
ಹುಡುಕಿ ಕೊಟ್ಟವರಿಗೆ
ಬಹುಮಾನವುಂಟು
ಹುಡುಕಿ ಕೊಡದವರ
ಮೇಲೆ....?
ಅನುಮಾನವುಂಟು..!!

<span title=ವೀರಣ್ಣ ಮಂಠಾಳಕರ್">

ಗಾಂಧಿ ಆಗ್ಬೇಕಂದುಕೊಂಡಾಗ
------------------------------

ಗಾಂಧಿ ಆಗ್ಬೇಕಂದುಕೊಂಡಾಗ

ತುಂಡು ಬಟ್ಟೆಯಲ್ಲಿ ತಿರಗಾಡ್ಬೇಕಲ್ಲ
ಜನ ನನ್ನ ನೋಡಿ ಬೆತ್ತಲೆ ಕತೆ
ಕಟ್ಟುತ್ತಾರೆಂಬ ಚಿಂತೆ...!

ಗಾಂಧಿ ಆಗ್ಬೇಕಂದುಕೊಂಡಾಗ

ಕೋಲು ಹಿಡಿದು ತಿರಗಾಡ್ಬೇಕಲ್ಲ
ಕೋಲು ಕಂಡ ಜನ, ಕೋಲಾಹಲ
ಎಬ್ಬಿಸುವರೆಂಬ ಚಿಂತೆ..!

ಗಾಂಧಿ ಆಗ್ಬೇಕಂದುಕೊಂಡಾಗ

ಬೋಳು ತಲೆಯಲ್ಲಿ ತಿರಗಾಡ್ಬೇಕಲ್ಲ
ಬಿಸಿಲು ಧಗೆಯಲ್ಲಿ ಜನ, ಮೊಟ್ಟೆ ಬೇಯಿಸಿ
ಹೊಟ್ಟೆ ತುಂಬಿಸಿಕೊಳ್ಳುತ್ತಾರೆಂಬ ಚಿಂತೆ..!

ಗಾಂಧಿ ಆಗ್ಬೇಕಂದುಕೊಂಡಾಗ

ದಪ್ಪ ಕನ್ನಡಕ ಕಣ್ಣಿಗೆ ಹಚ್ಚಬೇಕಲ್ಲ
ಕನ್ನಡಕ ಕಂಡ ಜನ, ಕಣ್ ಕಾಣ್ಸೋದಿಲ್ಲಂತ
ತಿಳಿದು, ಕಂಡಲ್ಲಿ ಗುಂಡಿಟ್ಟು ಕೊಲ್ಲುತ್ತಾರೆಂಬ ಚಿಂತೆ.!

ಗಾಂಧಿ ಆಗ್ಬೇಕಂದುಕೊಂಡಾಗ

ನನ್ನ ಅಂಥಾವ್ರೆ ಜಗದ ತುಂಬೆಲ್ಲ
ಗಸ್ತು ತಿರುಗುತ್ತಾ, ಸತ್ಯ ಶೋದನೆಗೆ
ಗುಂಡಿಟ್ಟು ಕೊಲ್ಲಲು, ಹುಡುಕಾಟ ನಡೆಸುತ್ತಾರೆಂಬ ಚಿಂತೆ...!!


-ಈ ಕವಿತೆ 2011 ರಲ್ಲಿ ನನ್ನ ಸ್ವರಚಿತ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲದಲ್ಲಿ ಪ್ರಕಟಗೊಂಡಿದ್ದು, ವಿವಿಧ ಪತ್ರಿಕೆಗಳಲ್ಲಿ ವಿಮಶೆ೯ಗೊಳಪಟ್ಟ ವಿಶೇಷ ಕವಿತೆ ಕೂಡ.

---------------

ನೀನಿಲ್ಲದೇ ನಾ ಹೇಗಿರಲಿ
ನಿನ್ನಿಂದಲೇ ನಾ ಬದುಕಿರಲಿ
ಇರುವತನಕ ಈ ಬಾಳ ದೋಣಿಯಲ್ಲಿ
ಕನಸುಗಳ ಸರಮಾಲೆ
ಹೊತ್ತುಕೊಂಡು ನಿನಗೇನು ತರಲಿ
ಹೇಳು ಗೆಳತಿ ನಿನ್ನ ಬಿಟ್ಟು
ನಾ... ಹೇಗೆ ಬದುಕಲಿ...
ಈಜುವ ಸಾಗರದಲ್ಲಿ....
ನಿನ್ನ ನೆನಪುಗಳೇ ತುಂಬಿರಲಿ...!!

-------------

ನಾನಾಗಿದ್ದರೆ ನೀ ತೊಡುವ....
--------------------------

ನೀ ತೊಡುವ ಬಳೆಗಳ ಕೈ

ನಾನಾಗಿದ್ದರೆ ಗೆಳತಿ
ನಾಜೂಕಾದ ಬಳೆಗಳು
ಚೂರಾಗದಂತೆ ಉಡುಗೋರೆಯಾಗಿ
ಕೊಟ್ಟು ಸಂಭ್ರಮಿಸುತಿದ್ದೆ
ನಯವಾದ ಕೈಗಳಾಗಿ ಶೋಭಿಸುತಿದ್ದೆ
ನಿನ್ನ ಮುಖದಲ್ಲಿ ಮಂದಹಾಸ ನಗುವನ್ನು ತರುತಿದ್ದೆ...!

ನುಣುಪಾದ ನಿನ್ನ ಕೆನ್ನೆ

ಅದೇ ಕೈಗಳಿಂದ ಸವರುತಿದ್ದೆ
ಆ ಬಳೆಗಳ ನಾದದಲ್ಲಿ
ನಿನ್ನ ಧ್ಯಾನವನ್ನೆಲ್ಲಾ
ನನ್ನತ್ತ ಸೆಳೆದುಕೊಳ್ಳುತಿದ್ದೆ..!!

ಕನ್ನಡಿಯೊಳಗಿನ ಪ್ರತಿಬಿಂಬ ನೀನು

ಶೖಂಗಾರವನ್ನು ಮಾಡಿಕೊಳ್ಳುವಾಗ
ನಿನ್ನ ಕಣ್ಣೊಳಗೆ ಕಣ್ಣಿಟ್ಟು ನೋಡುತಿದ್ದೆ
ನಿನ್ನ ಸೌಂದಯ೯ದ ಧ್ಯಾನದಲ್ಲಿ
ಲೀನವಾಗಿ, ಪ್ರೇಮಗೀತೆಯೊಂದು ಬರೆಯುತಿದ್ದೆ
ನಿನ್ನ ಹೆಸರಿನಲ್ಲೇ ಗುನುಗುನಿಸುತ್ತಾ ಹಾಡುತಿದ್ದೆ
ಗೆಳತಿ, ನೀ... ಹೋದೆಡೆಯಲೆಲ್ಲಾ ಇರುತಿದ್ದೆ...!!?

ನಿನ್ನ ಮುಖದ ಕಾಂತಿಯನ್ನು

ಕೈ ಬೀಸಿ ಕರೆದು, ಗಾಳಿಯಲ್ಲಿ ತೇಲಾಡುತ್ತ
ಸೌಂದಯ೯ವನ್ನು ಸಾರಿ ಹೇಳುವ ಕಿವಿಯೋಲೆಗಳು
ಓಲಾಡುವಾಗ, ಅದರ ಕೈ ಹಿಡಿದು ಜೀಕುತಿದ್ದೆ
ನಿನ್ನೊಂದಿಗೆಯೇ ಬಿಡದೇ ಜೀವಿಸುತಿದ್ದೆ
ಮಲಗಿದಾಗಲೂ ನೀ...
ನಿನ್ನ ತಲೆಯ ದಿಂಬಾಗಿ ಇರುತಿದ್ದೆ....!!

ಹೊಳಪಾದ ನಿನ್ನ ಕಣ್ಣುಗಳಿಂದ

ತೊಟ್ಟಿಕ್ಕುವ ಕಣ್ಣೀರು ಒರೆಸುತಿದ್ದೆ
ತಡೆಯುತಿದ್ದೆ, ಕೆಂಪಾದ ನಿನ್ನ ಕೆನ್ನೆಗುಂಟ
ಜಾರುವ ಬಿಸಿಯುಸಿರಿನ ಕಣ್ಣೀರು...
ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ....

ನಿನ್ನ ದುಖವನ್ನೆಲ್ಲಾ ನನ್ನದಾಗಿಸಿಕೊಂಡು

ಸಾಂತ್ವನಿಸುತಿದ್ದೆ, ಕೈ ಹಿಡಿದು ನಿನ್ನನ್ನು
ನನ್ನೆದೆಗಪ್ಪಿಕೊಳ್ಳುತಿದ್ದೆ ಪ್ರಿಯೆ.....

ಆರದ, ಮರೆಯದ ಗಾಯ ಹುಣ್ಣಾಗದಂತೆ

ಒಲವೆಂಬ ಮುಲಾಮನ್ನು ಹಚ್ಚುತಿದ್ದೆ
ನೀ ನಡೆವ ಹಾದಿಯಲ್ಲಿ..!!!!!!!!!!!
ಮುಳ್ಳುಗಳೇಷ್ಟೇ ಇದ್ದರೂ
ಕಿತ್ತೆಸೆದು ಬಿಡುತಿದ್ದೆ, ನಿನ್ನ ಬಾಳ ಪಯಣದಲ್ಲಿ
ಹೂ-ಹಾಸಿಗೆ ಚೆಲ್ಲುತಿದ್ದೆ....

ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ

ಹೂ-ನಗೆಯಾಗುವ ನಿನ್ನ ಮುಖಕೆಲ್ಲಾ ಮುತ್ತಾಗುತಿದ್ದೆ
ಹೊಂಗನಸಿನ ರಾತ್ರಿಗೆ ನವಿಲಾಗುತಿದ್ದೆ
ಕೋಗಿಲೆಯ ಕಂಠಕ್ಕೆ ಕವಿಯಾಗುತಿದ್ದೆ
ಕಲ್ಪನೆಯ ಚೆಲುವೆಗೆ ಚಿತ್ರಕಾರನಾಗುತಿದ್ದೆ
ಕೈ ಹಿಡಿವ ಜೊತೆಗಾರನಾಗಿ ಇರುತಿದ್ದೆ ಗೆಳತಿ
ನಿನ್ನ ಮುಗ್ಧ ಮನಸ್ಸಿನ ಸೌಂದಯ೯ದ
ಆರಾದಕನಾಗಿರುತಿದ್ದೆ.... ಅಭಿಮಾನಿಯಾಗಿರುತಿದ್ದೆ..|

-ರಚನೆಃ ವಿ.ಎಚ್. ವೀರಣ್ಣ ಮಂಠಾಳಕರ್




ನಾನಾಗಿದ್ದರೆ ನೀ ತೊಡುವ....
--------------------------

ನೀ ತೊಡುವ ಬಳೆಗಳ ಕೈ
ನಾನಾಗಿದ್ದರೆ ಗೆಳತಿ
ನಾಜೂಕಾದ ಬಳೆಗಳು
ಚೂರಾಗದಂತೆ ಉಡುಗೋರೆಯಾಗಿ
ಕೊಟ್ಟು ಸಂಭ್ರಮಿಸುತಿದ್ದೆ
ನಯವಾದ ಕೈಗಳಾಗಿ ಶೋಭಿಸುತಿದ್ದೆ
ನಿನ್ನ ಮುಖದಲ್ಲಿ ಮಂದಹಾಸ ನಗುವನ್ನು ತರುತಿದ್ದೆ...!

ನುಣುಪಾದ ನಿನ್ನ ಕೆನ್ನೆ
ಅದೇ ಕೈಗಳಿಂದ ಸವರುತಿದ್ದೆ
ಆ ಬಳೆಗಳ ನಾದದಲ್ಲಿ
ನಿನ್ನ ಧ್ಯಾನವನ್ನೆಲ್ಲಾ
ನನ್ನತ್ತ ಸೆಳೆದುಕೊಳ್ಳುತಿದ್ದೆ..!!

ಕನ್ನಡಿಯೊಳಗಿನ ಪ್ರತಿಬಿಂಬ ನೀನು
ಶೖಂಗಾರವನ್ನು ಮಾಡಿಕೊಳ್ಳುವಾಗ
ನಿನ್ನ ಕಣ್ಣೊಳಗೆ ಕಣ್ಣಿಟ್ಟು ನೋಡುತಿದ್ದೆ
ನಿನ್ನ ಸೌಂದಯ೯ದ ಧ್ಯಾನದಲ್ಲಿ
ಲೀನವಾಗಿ, ಪ್ರೇಮಗೀತೆಯೊಂದು ಬರೆಯುತಿದ್ದೆ
ನಿನ್ನ ಹೆಸರಿನಲ್ಲೇ ಗುನುಗುನಿಸುತ್ತಾ ಹಾಡುತಿದ್ದೆ
ಗೆಳತಿ, ನೀ... ಹೋದೆಡೆಯಲೆಲ್ಲಾ ಇರುತಿದ್ದೆ...!!?

ನಿನ್ನ ಮುಖದ ಕಾಂತಿಯನ್ನು
ಕೈ ಬೀಸಿ ಕರೆದು, ಗಾಳಿಯಲ್ಲಿ ತೇಲಾಡುತ್ತ
ಸೌಂದಯ೯ವನ್ನು ಸಾರಿ ಹೇಳುವ ಕಿವಿಯೋಲೆಗಳು
ಓಲಾಡುವಾಗ, ಅದರ ಕೈ ಹಿಡಿದು ಜೀಕುತಿದ್ದೆ
ನಿನ್ನೊಂದಿಗೆಯೇ ಬಿಡದೇ ಜೀವಿಸುತಿದ್ದೆ
ಮಲಗಿದಾಗಲೂ ನೀ...
ನಿನ್ನ ತಲೆಯ ದಿಂಬಾಗಿ ಇರುತಿದ್ದೆ....!!

ಹೊಳಪಾದ ನಿನ್ನ ಕಣ್ಣುಗಳಿಂದ
ತೊಟ್ಟಿಕ್ಕುವ ಕಣ್ಣೀರು ಒರೆಸುತಿದ್ದೆ
ತಡೆಯುತಿದ್ದೆ, ಕೆಂಪಾದ ನಿನ್ನ ಕೆನ್ನೆಗುಂಟ
ಜಾರುವ ಬಿಸಿಯುಸಿರಿನ ಕಣ್ಣೀರು...
ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ....

ನಿನ್ನ ದುಖವನ್ನೆಲ್ಲಾ ನನ್ನದಾಗಿಸಿಕೊಂಡು
ಸಾಂತ್ವನಿಸುತಿದ್ದೆ, ಕೈ ಹಿಡಿದು ನಿನ್ನನ್ನು
ನನ್ನೆದೆಗಪ್ಪಿಕೊಳ್ಳುತಿದ್ದೆ ಪ್ರಿಯೆ.....

ಆರದ, ಮರೆಯದ ಗಾಯ ಹುಣ್ಣಾಗದಂತೆ
ಒಲವೆಂಬ ಮುಲಾಮನ್ನು ಹಚ್ಚುತಿದ್ದೆ
ನೀ ನಡೆವ ಹಾದಿಯಲ್ಲಿ..!!!!!!!!!!!
ಮುಳ್ಳುಗಳೇಷ್ಟೇ ಇದ್ದರೂ
ಕಿತ್ತೆಸೆದು ಬಿಡುತಿದ್ದೆ, ನಿನ್ನ ಬಾಳ ಪಯಣದಲ್ಲಿ
ಹೂ-ಹಾಸಿಗೆ ಚೆಲ್ಲುತಿದ್ದೆ....

ನಾನಾಗಿದ್ದರೆ ನೀ ತೊಡುವ ಬಳೆಗಳ ಕೈ
ಹೂ-ನಗೆಯಾಗುವ ನಿನ್ನ ಮುಖಕೆಲ್ಲಾ ಮುತ್ತಾಗುತಿದ್ದೆ
ಹೊಂಗನಸಿನ ರಾತ್ರಿಗೆ ನವಿಲಾಗುತಿದ್ದೆ
ಕೋಗಿಲೆಯ ಕಂಠಕ್ಕೆ ಕವಿಯಾಗುತಿದ್ದೆ
ಕಲ್ಪನೆಯ ಚೆಲುವೆಗೆ ಚಿತ್ರಕಾರನಾಗುತಿದ್ದೆ
ಕೈ ಹಿಡಿವ ಜೊತೆಗಾರನಾಗಿ ಇರುತಿದ್ದೆ ಗೆಳತಿ
ನಿನ್ನ ಮುಗ್ಧ ಮನಸ್ಸಿನ ಸೌಂದಯ೯ದ
ಆರಾದಕನಾಗಿರುತಿದ್ದೆ.... ಅಭಿಮಾನಿಯಾಗಿರುತಿದ್ದೆ..|


- ರಚನೆಃ ವೀರಣ್ಣ ಮಂಠಾಳಕರ್

ಸೋಮವಾರ, ಫೆಬ್ರವರಿ 6, 2012

ಪುಸ್ತಕ ವಿಮಶೆ೯


ಕಳೆದ ಸೆಪ್ಟೆಂಬರ್ 2011 ನೇ ಸಾಲಿನ ಮಾನಸ ಸಂಚಿಕೆಯಲ್ಲಿ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಪುಸ್ತಕ ವಿಮಶೆ೯ ಮಾಡಿರುವ ಕುರಿತು. ಸ್ಕ್ಯಾನ್ ಫೋಟೊ. ಮಾನಸ ಸಂಪಾದಕರಾದ ಗಣೇಶ ಕೊಡೂರ್ ಅವರಿಗೆ ಧನ್ಯವಾದಗಳು.